ಹೊಸ ವರ್ಷಾಚರಣೆ ಗೆ ಕೌಂಡೌನ್ - ನಗರದ ಪ್ರತ್ಯೇಕ ವಾರ್ ರೂಮ್ ಅಳವಡಿಕೆ

ಶನಿವಾರ, 31 ಡಿಸೆಂಬರ್ 2022 (14:58 IST)
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ನಗರದಲ್ಲಿ ಸಿಸಿಟಿವಿ ನಿರ್ವಹಣೆ ಗೆ ಪ್ರತ್ಯೇಕ ವಾರ್ ರೂಮ್‌ ಮಾಡಲಾಗಿದೆ.ಬ್ರಿಗೇಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ 500 ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.ಅತಿಹೆಚ್ಚು ಜನ ಸರೋ ರಸ್ತೆಗಳಾಗಿದ್ದು ,ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.ಒಂದೇ ಕಡೆ ಎಲ್ಲಾ ಸಿಸಿಟಿವಿ ಗಳ ಮಾನೀಟರ್ ಮಾಡಲಾಗುತ್ತದೆ.ಅನುಚಿತ ವರ್ತನೆ, ಕಳ್ಳ ತನ ದಂತಹ ದೃಶ್ಯಗಳು ಕಂಡು ಬಂದರೆ ತಕ್ಷಣ ಮಾಹಿತಿ ರವಾನೆಯಾಗುತ್ತದೆ.ಎರಡು ವರ್ಷಗಳ ನಂತರ ನ್ಯೂ ಇಯಾರ್ ಸೆಲೆಬ್ರೇಷನ್ ಜೋರಾಗಿದೆ.ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ