ಆಕೆ ಬಡತನದಲ್ಲೇ ಬೆಳೆದವಳು.ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿದ್ದವಳು.ಸ್ವಂತದ್ದೊಂದು ಮನೆ ಮಾಡಬೇಕೆಂಬ ಆಸೆ ಹೊಂದಿದ್ದವಳು.ಆದರೆ ವಿಧಿಯಾಟವೇ ಬೇರೆಯಾಗಿತ್ತು.ಭಾನುವಾರ ಅಂತಾ ಸ್ನೇಹಿತನ ಜೊತೆಗೆ ಸ್ಕೂಟರ್ ಹತ್ತಿ ಹೋದವಳು ಮನೆ ಸೇರೊ ಮುಂಚಿಯೇ ಸಾವಿನ ಮನೆ ಸೇರಿದ್ದಾಳೆ.ಚೆಲುವೆಯ ಹೆಸರು ಸುಲೋಚನ.ಇನ್ನೂ 24 ರ ಹರೆಯ.ಮಂಡ್ಯ ಮೂಲದ ಸುಲೋಚನ ಕುಟುಂಬ ಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು.ಈಕೆಯ ತಾಯಿ ಮನೆಗೆಲಸ ಮಾಡಿ ಮಗಳನ್ನ ಓದಿಸಿದ್ರು..ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಒಂದೂವರೆ ವರ್ಷದ ಹಿಂದೆ ಕೋರಮಂಗಲದಲ್ಲಿರುವ ಕಂಪನಿ ಒಂದರಲ್ಲಿ ಕೆಲಸ ಮಾಡ್ತಿದ್ಳು.ತಮ್ಮನನ್ನ ತಾನೇ ಓದಿಸ್ತಿದ್ಳು..ಆದರೆ ವಿಧಿ ಎಲ್ಲದಕ್ಕೂ ಅಂತ್ಯ ಹಾಡಿಬಿಟ್ಟಿದೆ.
ಕಂಪನಿಗೆ ರಜೆ ಹಾಗಾಗಿ ಸುಲೋಚನ ಸ್ನೇಹಿತ ಆನಂದ್ ಎಂಬಾತನ ಜೊತೆಗೆ ಕನಕಪುರ ಕಡೆ ತೆರಳಿದ್ಳು.ಸುಜುಕಿ ಆ್ಯಕ್ಸಿಸ್ ಸ್ಕೂಟರ್ ಹತ್ತಿ ಹೊರಟವ್ರು ಸುತ್ತಾಟ ನಡೆಸಿ ಸಂಜೆ ಆಗ್ತಿದ್ದಂತೆ ಮತ್ತೆ ಬೆಂಗಳೂರು ಕಡೆಗೆ ವಾಪಸ್ಸಾಗಿದ್ರು.ನೈಸ್ ರಸ್ತೆ ಮೂಲಕ ಬಂದವ್ರು ಇನ್ನೇನು ಪಿಇಎಸ್ ಕಾಲೇಜು ಟೋಲ್ ದಾಟಬೇಕಿತ್ತು ಅಷ್ಟರಲ್ಲಾಗಲೇ ಸ್ಕೂಟರ್ ಹಿಂಬದಿ ಟೈರ್ ಪಂಕ್ಚರ್ ಆಗಿ ಬಸ್ಟ್ ಆಗಿದೆ..ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದು ಗಂಭೀರವಾದ ಗಾಯಗೊಂಡಿದ್ದಾರೆ..ಗಾಯಾಳುಗಳನ್ನ ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು..ಆನಂದ್ ಫುಲ್ ಹೆಲ್ಮೆಟ್ ಧರಿಸಿದ್ದ ಹಾಗಾಗಿ ತಲೆಗೆ ಹೆಚ್ಚು ಗಾಯಗಳಾಗಿರ್ಲಿಲ್ಲ..ಸುಲೋಚನ ಹಾಫ್
ಹೆಲ್ಮೆಟ್ ಧರಿಸಿದ್ಳು..ಹಾಗಾಗಿ ತಲೆಗೆ ಗಂಭೀರ ಗಾಯವಾಗಿತ್ತು..ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಲೇಚನ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸಾವನ್ನಪ್ಪಿದ್ದಾಳೆ
ಇನ್ನೂ ಸುಲೋಚನ ತಾಯಿ ಮತ್ತು ತಮ್ಮನ ಜೊತೆಗೆ ಬೆಂಗಳೂರಲ್ಲಿ ವಾಸವಿದ್ರೆ ತಂದೆ ಮಂಡ್ಯದಲ್ಲಿ ಇರ್ತಿದ್ದ.ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ಳು.ತಮ್ಮನನ್ನ ಓದಿಸುತ್ತಿದ್ಳು..ಬೆಂಗಳೂರಲ್ಲಿ ಸ್ವಂತದ್ದೊಂದು ಮನೆ ಮಾಡಿ ಕುಟುಂಬಸ್ಥರನ್ನ ಖುಷಿಯಾಗಿಡೊ ಆಲೋಚನೆಯಲ್ಲಿದ್ಳು..ಅಷ್ಟರಲ್ಲಾಗಲೇ ವಿಧಿ ಸುಲೋಚನ ಜೀವನದ ಪಯಣವನ್ನೇ ಅಂತ್ಯಗೊಳಿಸಿದ್ದಾನೆ.ಕಷ್ಟಪಟ್ಟು ಬೆಳೆದವಳು..ಓದಿ ಇಂಜಿನಿಯರ್ ಆದವಳು..ಒಂದೊಳ್ಳೆ ಕೆಲಸಕ್ಕೆ ಸೇರಿ ಕೈ ತುಂಬ ಸಂಬಳ ಪಡಿತಿದ್ದವಳು..ಜೀವನದ ಬಗ್ಗೆ ಬಹುದೊಡ್ಡ ಕನಸು ಕಂಡಿದ್ದವಳು..ನಡು ರಸ್ತೆಯಲ್ಲಿ ಬಿದ್ದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಎಂತಹವರ ಕಣ್ಣಲು ನೀರು ತರಿಸುತ್ತೆ