ಶೀಘ್ರವೇ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮಾರುಕಟ್ಟೆಗೆ: ತಜ್ಞರ ಸಮಿತಿ ಶಿಫಾರಸು

ಶುಕ್ರವಾರ, 21 ಜನವರಿ 2022 (20:40 IST)
ಕೋವಿಡ್‌ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಅನುಮತಿ ಪಡೆದಿದ್ದ ಕೊವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಈಗ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಕೇಂದ್ರ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ (ಸಿಡಿಎಸ್ ಸಿಒ) ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಬಗ್ಗೆ ಸೀರಂ ಇನ್‌ ಸ್ಟಿಟ್ಯೂಟ್‌ ಹಾಗೂ ಭಾರತ್‌ ಬಯೋಟೆಕ್‌ ತಮ್ಮ ಲಸಿಕೆಗಳನ್ನು ಮಾರುಕಟ್ಟೆಗೆ ಒದಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ ಸಿಡಿಎಸ್ ಸಿಒ ಎರಡೂ ಲಸಿಕಾ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಿ, ಈ ವಿಷಯವನ್ನು ಡಿಸಿಜಿಐಗೆ ಶಿಫಾರಸು ಮಾಡಿದೆ.
ಲಸಿಕೆ ಮಾರುಕಟ್ಟೆಗೆ ಬರುವ ಮೊದಲು ಡಿಸಿಜಿಐ ಮೌಲ್ಯಮಾಪನ ಮಾಡಲಿದ್ದು, ಬಳಿಕವೇ ನಿರ್ಧಾರ ಪ್ರಕಟಿಸಲಿದೆ. ಈ ಲಸಿಕೆ ಡೋಸ್‌ ಗಳನ್ನು ಸಂಗ್ರಹಿಸಲು 2-8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಅಗತ್ಯವಿದ್ದು, ಲಸಿಕೆ ಮಾರುಕಟ್ಟೆ ಬಳಕೆಗೆ ಅನುಮತಿ ದೊರಕಿದರೂ ಜನ ಸಾಮಾನ್ಯರ ಕೈ ಸೇರಲು ಕೆಲ ಸಮಯಾವಕಾಶ ಬೇಕಾಗುತ್ತದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ 2021ರ ಜನವರಿಯಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳಿಗೆ ಕೋವಿಡ್‌ ವಿರುದ್ಧ ಹೋರಾಟಕ್ಕೆ ಅನುಮತಿ ನೀಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ