ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ

ಗುರುವಾರ, 30 ಡಿಸೆಂಬರ್ 2021 (17:59 IST)
ಹೈದರಾಬಾದ್ : ಕೋವ್ಯಾಕ್ಸಿನ್ ವಯಸ್ಕರಿಗಿಂತ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯನ್ನು ತುಂಬಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿ ತುಂಬಿದೆ.
 
ಕೋವ್ಯಾಕ್ಸಿನ್ ತುಂಬಾ ಸುರಕ್ಷಿತಾ ಎಂದು ಭಾರತ್ ಬಯೋಟೆಕ್ ಅಭಿಪ್ರಾಯಪಟ್ಟಿದೆ.

12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಕೆಲದಿನಗಳ ಹಿಂದೆ ಅಮನುತಿ ನೀಡಿತ್ತು.

ಇದೀಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಲಸಿಕೆ ಕಂಡುಹಿಡಿದ ಭಾರತ್ ಬಯೋಟೆಕ್, ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಪರೀಕ್ಷಿಸಿದಾಗ ಇದು ವಯಸ್ಕರಿಗಿಂತ 1.7 ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ವೃದ್ಧಿಸುತ್ತದೆ ಎಂಬ ಅಂಶ ತಿಳಿದುಬಂದಿದೆ.

ಲಸಿಕೆ ಪರೀಕ್ಷೆ ವೇಳೆ 95 ರಿಂದ 98% ಮಕ್ಕಳಲ್ಲಿ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ವೇಳೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದೆ.

525 ಮಂದಿ ಮಕ್ಕಳಿಗೆ ಲಸಿಕೆ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ 2 ರಿಂದ 6 ವರ್ಷದ 175 ಮಕ್ಕಳು, 6 ರಿಂದ 12 ವರ್ಷದ 175 ಮಕ್ಕಳು ಮತ್ತು 12 ರಿಂದ 18 ವರ್ಷದ 176 ಮಕ್ಕಳಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ