ರಾಜ್ಯದಲ್ಲಿ ಸೋಮವಾರ ಕೋವಿಡ್-19 ಆಸ್ಪತ್ರೆಗಳ ಬೆಡ್‌ಗಳಲ್ಲಿ ಶೇ.3ರಷ್ಟು ರೋಗಿಗಳು ದಾಖಲಾಗಿದ್ದಾರೆ.
ಮಂಗಳವಾರ ರಾಜ್ಯಾದ್ಯಂತ 41,೦೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಶೇ5.3ರಷ್ಟು ಹೆಚ್ಚಾಗಿದೆ.
ಸೋಮವಾರ 2,548 ಸೋಂಕಿತರು ದಾಖಲಾಗಿದ್ದರೆ, ಮಂಗಳವಾರ ಈ ಸಂಖ್ಯೆ 4,795ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.