ರಾಜ್ಯದಲ್ಲಿ ಕನಿಷ್ಠ ಮಟ್ಟಕ್ಕಿಳಿದ ಕೋವಿಡ್ ಕೇಸ್

ಮಂಗಳವಾರ, 29 ಮಾರ್ಚ್ 2022 (20:34 IST)
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಾಣುತ್ತಿವೆ. ಇಂದು ಹೊಸದಾಗಿ 64 ಮಂದಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟರೇ, ಸೋಂಕಿತರಾದಂತ 62 ಮಂದಿ ಗುಣಮುಖರಾಗಿದ್ದಾರೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 51, ಬಳ್ಳಾರಿ, ಚಾಮರಾಜನಗರ, ದಕ್ಷಿಣ ಕನ್ನಡ, ಕಲಬುರ್ಗಿ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ. ರಾಮನಗರ 2, ಚಿತ್ರದುರ್ಗದಲ್ಲಿ 4 ಸೇರಿದಂತೆ ಒಟ್ಟು 64 ಮಂದಿಗೆ ಕೋವಿಡ್ ಪಾಸಿಟಿವ್ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 39,45,311ಕ್ಕೆ ಏರಿಕೆಯಾಗಿದೆ. ಇಂದು 62 ಜನರು ಸೇರಿದಂತೆ 39,03,442 ಸೋಂಕಿತರು ಗುಣಮುಖರಾದ ಕಾರಣ, ರಾಜ್ಯದಲ್ಲಿ ಈಗ 1,777 ಸಕ್ರೀಯ ಸೋಂಕಿತರು ಇದ್ದಾರೆ ಎಂದು ತಿಳಿಸಿದೆ.
ಇನ್ನೂ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರಲ್ಲಿ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವನ್ನಪ್ಪಿದವರ ಸಂಖಅಯೆ 40,050ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ