ಇಂದಿನಿಂದ ರಾಜ್ಯದಲ್ಲಿ ಕೋವಿಡ್​ ಟೆಸ್ಟಿಂಗ್ ಲ್ಯಾಬ್​ಗಳು ಓಪನ್: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸಲಹೆ

Sampriya

ಭಾನುವಾರ, 25 ಮೇ 2025 (12:48 IST)
ಬೆಂಗಳೂರು: ದೇಶದಲ್ಲಿ ಕೋವಿಡ್‌ ಮಹಾಮಾರಿಯ ಮತ್ತೆ ಆತಂಕ ಹೆಚ್ಚುತ್ತಿದೆ. ನೆರೆಯ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಸೋಂಕು ರಾಜ್ಯದಲ್ಲೂ ಮತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಶನಿವಾರ 85 ವರ್ಷದ ವೃದ್ಧರೊಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇಂದಿನ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಆರಂಭವಾಗಲಿದೆ.

ಕೋವಿಡ್ ಪ್ರಕರಣಗಳ ಏರಿಕೆಯನ್ನು ಗಮನಿಸಿ, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಎಂಟು ಆರ್ ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಗಳನ್ನು ಮತ್ತೆ ಓಪನ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಶನಿವಾರದವರೆಗೆ 35 ಕೋವಿಡ್ ಕೇಸ್ ದಾಖಲಾಗಿದೆ. ದೇಶದಲ್ಲಿ 257 ಪ್ರಕರಣಗಳು ದಾಖಲಾಗಿದೆ. ಹೆಚ್ಚುತ್ತಿರುವ ಪ್ರಕರಣಗಳ ಭೀತಿಯಿಂದ ಆಯ್ದಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.  

ಮಾಸ್ಕ್ ಧರಿಸಿ​: ಕೋವಿಡ್ ಬಂದವರಿಗೆ ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳಿದ್ದು, ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ. ಪ್ರಕರಣಗಳು ತಮ್ಮ‌ಮನೆಯಲ್ಲೇ ಉಳಿಯಬೇಕು. ಬಾಣಂತಿಯರು ಹೆಚ್ಚು ಜಾಗ್ರತೆಯಿಂದ ಇರ್ಬೇಕು ಎಲ್ಲರೂ ಮಾಸ್ಕ್ ಧರಿಸಬೇಕು. ಆದರೆ, ಯಾರು ಭಯ ಪಡುವುದು ಬೇಡ, ಅನಾವಶ್ಯಕವಾಗಿ ಸದ್ಯಕ್ಕೆ ಭಯ ಬೇಡ. ಮಾಸ್ಕ್ ಧರಿಸಿದರೆ ನಮಗೆ ಒಳ್ಳೆಯದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.  

ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ, ಸ್ಯಾನಿಟೈಸರ್ ಬಳಸಿ. ಊರುಗಳಿಗೆ ಓಡಾಡುವುದಕ್ಕೆ ತೊಂದರೆಯಿಲ್ಲ. ಜನರಲ್ಲಿ ಬೇಕಾದರೆ ಜಾಗೃತಿ ಮೂಡಿಸಿ. ನಾವು ಟೆಸ್ಟಿಂಗ್ ಕಿಟ್ ತೆಗೆದಿರಿಸಿದ್ದೇವೆ ಮತ್ತು ಟೆಸ್ಟ್ ಮಾಡಲೇಬೇಕಾದ ಟೆಸ್ಟ್ ಮಾಡುತ್ತೇವೆ. ಜ್ವರ ಬಂದವರು ತಮ್ಮ‌ಮನೆಯಲ್ಲೇ ಕಡಿಮೆಯಾಗುವವರೆಗೂ ಹೊರಬರಬೇಡಿ. ಕೋವಿಡ್‌ ಪ್ರಕರಣಗಳು ಅಷ್ಟೇನು ಗಂಭೀರ ಅಲ್ಲ, ಯಾರೂ ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ.

ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
* ಗರ್ಭಿಣಿಯರು, ಮಕ್ಕಳು ಹಾಗೂ ಕಾಮಾರ್ಬಿಟ್ ರೋಗಿಗಳು ಮುಂಜಾಗೃತ ಕ್ರಮವಹಿಸುವುದು ಸೂಕ್ತ
* ಜನನಿಬಿಡ ಪ್ರದೇಶದಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಒಳ್ಳೆಯದು
* ಸ್ಯಾನಿಟೈಸ್, ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಹೆಚ್ಚಿನ ಗಮನ ಹರಿಸಬೇಕು
* ರೋಗ ಗುಣ ಲಕ್ಷಣಗಳು ಇರುವವರು ಕೂಡಲೇ ಕೊರೊನಾ ಟೆಸ್ಟ್ ಮಾಡಿಸುವಂತೆ ಸೂಚನೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ