ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ ಬೆನ್ನಲ್ಲೇ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ

Sampriya

ಶುಕ್ರವಾರ, 28 ಫೆಬ್ರವರಿ 2025 (11:24 IST)
Photo Courtesy X
ಬೆಂಗಳೂರು: ಈಚೆಗೆ ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಇದೀಗ ಹಸಿರು ಬಟಾಣಿಯಲ್ಲೂ  ಕ್ಯಾನ್ಸರ್ ಕಾರಕ ಪತ್ತೆಯಾಗಿರುವ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ವರದಿ ನೀಡಿದೆ.

ಇಲಾಖೆ ನಡೆಸಿದ ವರದಿಯಲ್ಲಿ ಬಟಾಣಿಗೆ ನಿಷೇಧಿತ ಕಲ್ಲರ್‌ ಅನ್ನು ಬಳಕೆ ಮಾಡಿರುವುದು ಪತ್ತೆಯಾಗಿದೆ. ಇದು ಈಗಾಗಲೇ  ರಾಜ್ಯಾದ್ಯಂತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 8 ರಿಂದ 10 ಕಡೆ ಕ್ಯಾನ್ಸರ್ ಕಾರಕ ಬಣ್ಣ ಬಳಕೆ ಮಾಡಿರುವುದು ತಿಳಿದುಬಂದಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇ

ಇನ್ನೂ ಹಸಿರು ಬಟಾಣಿಗೆ ನಿಷೇಧಿತ ಕಲರ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಬೀರಲಿದೆಯಂತೆ. ಕೆಮಿಕಲ್‌ನಿಂದ ಸಾಕಷ್ಟು ಎಫೆಕ್ಟ್ ಆಗುತ್ತೆ ಅಂತ ಆಹಾರ ತಙ್ಞರು ಹೇಳ್ತಾರೆ.  

ಹಸಿರು ಬಟಾಣಿಗೆ ನಿಷೇಧಿತ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಿಟೆಕ್ಷನ್ ಆಫ್ ಟಾಕ್ಸಿನ್ ಪ್ರಮಾಣ ಏರಿಕೆಯಾಗುತ್ತದೆ. ಇದರಿಂದ ಮೂತ್ರ ಉತ್ಪತ್ತಿ ಕಡಿಮೆಯಾಗಿ ಇದರಿಂದ ಕಿಡ್ನಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಕ್ಯಾನ್ಸರ್‌ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ