ರಾಜ್ಯಕ್ಕೆ ಮೂರನೇ ಅಲೆ ಬಾರದಂತೆ ತಡೆಯಬೇಕಿದೆ: ಸಚಿವ ಸುಧಾಕರ್

ಸೋಮವಾರ, 30 ಆಗಸ್ಟ್ 2021 (14:38 IST)
ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಇನ್ನೂ ಕಾಲಿಟ್ಟಿಲ್ಲ. ಅದು ಬಾರದಂತೆ ತಡೆಯಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಹೇಳಿ
ದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶೇ. 27.1ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಎರಡು ಡೋಜ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಬಿಜೆಪಿ ಮುಖಂಡರೇ ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಸಾಮರಸ್ಯ ಇರಬೇಕು. ಯಾವುದೇ ಹಬ್ಬಗಳಿಗೆ ಸರ್ಕಾರದ ವಿರೋಧವಿಲ್ಲ. ಎಲ್ಲರ ಹಿತವನ್ನ ಸರ್ಕಾರ ಕಾಪಾಡಬೇಕು. ಪರಿಸ್ಥಿತಿ ಈಗ ಸರಿಯಿಲ್ಲ ಎಂದು ಅವರು ಹೇಳಿದರು.
ನಾವೇ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನ ಮಾಡಿಕೊಂಡಿದ್ದೇವೆ. ಆ ಮಾರ್ಗಸೂಚಿಗಳನ್ನ ನಾವೇ ಪಾಲನೆ ಮಾಡಬೇಕು. ಜನಾಶೀರ್ವಾದ ಯಾತ್ರೆಯಲ್ಲಿ‌ ಜನ ಸೇರಬಾರದೆಂದು ನಾವು‌ ಹೇಳಿದ್ದೆವು. ಚುನಾವಣಾ ಆಯೋಗಕ್ಕೂ ಮನವಿ‌ ಮಾಡಿದ್ದೆವು. ಚುನಾವಣೆ ಸದ್ಯಕ್ಕೆ ಬೇಡ ಮುಂದೂಡಿ ಎಂದಿದ್ದೆವು. ಆದರೆ ಆಯೋಗ ಜವಾಬ್ದಾರಿಯನ್ನ ಹಾಕಿದೆ ಏನು ಮಾಡುವುದು ಎಂದು ಸುಧಾಕರ್ ಮರು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ