ಟೋಕಿಯೊ ಪ್ಯಾರಲಿಂಪಿಕ್ಸ್: ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದು ಇತಿಹಾಸ ಬರೆದ ಶೂಟರ್ ಅವನಿ!

ಸೋಮವಾರ, 30 ಆಗಸ್ಟ್ 2021 (14:24 IST)
ಭಾರತದ ಲೇಖರ ಟೋಕಿಯೊ ಒಲಿಂಪಿಕ್ಸ್ ನ 10ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಚಿನ್ನದ ಪದಕ
ಗೆದ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
2012ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೊಂಟದ ಮೇಲಿನ ಬಲ ಕಳೆದುಕೊಂಡಿದ್ದ 19 ವರ್ಷದ ಅವನಿ ಲೇಖರ 249.6 ಮೀ. ಅಂಕ ಸಂಪಾದಿಸುವ ಮೂಲಕ 2018ರಲ್ಲಿ ಉಕ್ರೇನ್ ನ ಐರ್ನಾ ಶೆಟ್ನಿಕ್ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.
ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದ ಅವನಿ ಫೈನಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಚಿನ್ನದ ಪದಕದ ಬರ ನೀಗಿಸಿದರು. ಚೀನಾದ ಜೆಂಗ್ ಕುಪಿಂಗ್ (248.9) ಬೆಳ್ಳಿ ಪದಕ ಗೆದ್ದರೆ, 2018ರಲ್ಲಿ ವಿಶ್ವದಾಖಲೆ ಬರೆದಿದ್ದ ಉಕ್ರೇನ್ ನ ಐರ್ನಾ ಶೆಟ್ನಿಕ್ (227.5) ಕಂಚಿನ ಪದಕಕ್ಕೆ ತೃಪ್ತರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ