ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ಪಟಾಕಿ ಖರೀದಿಗೆ ಮುಗಿಬೀಳುತ್ತಾರೆ. ಆದರೆ ಈ ವರ್ಷ ದೀಪಾವಳಿಗೆ ಪಟಾಕಿಗಳಿಗೂ ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧ ಹೇರಿದೆ. ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶ ನೀಡಿದೆ. ಇಲ್ಲದೇ ಹೋದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿದೆ.
ಸುರ್ ಸರುಬತ್ತಿ 100 ರೂ.ವರೆಗಿದ್ದರೆ, ನೆಲಚಕ್ರ 350 ರೂ., ಲಕ್ಷ್ಮೀ ಪಟಾಕಿ 15000-2000 ರೂ., ಫ್ಲವರ್ ಪಾಟ್ 660 ರೂ. ವರೆಗೆ ತಲುಪಿದೆ. ಕಳೆದ ವರ್ಷ 60 ರೂ.ಗಳಿದ್ದ ಒಂದು ಪಟಾಕಿಗೆ ಇಂದು 100 ರೂ.ಗೆ ಬಂದು ನಿಂತಿದೆ. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಹಸಿರು ಮಾರ್ಕ್ ನೋಡಿಯೇ ಜನ ಪಟಾಕಿ ಖರೀದಿ ಮಾಡುತ್ತಿದ್ದಾರೆ.