ರೈತರ ಹೆಸರಿನಲ್ಲಿ ಕೋಟಿಗಟ್ಟಲೆ ಲೂಟಿ ಮಾಡುತ್ತಿರುವ ಸರಕಾರ: ರೈತ ಮುಖಂಡರ ಆರೋಪ

ಮಂಗಳವಾರ, 30 ಅಕ್ಟೋಬರ್ 2018 (14:42 IST)
ರಾಜ್ಯ ಸರಕಾರದವರು ರೈತರ ಹೆಸರನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ. ಸಹಕಾರಿ ಬ್ಯಾಂಕಗಳು ಭ್ರಷ್ಟರ ಖಜಾನೆಗಳಾಗಿವೆ. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ಗೌಡಗೇರಾ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ರೈತರೆಲ್ಲಾ ಸೇರಿಕೊಂಡು ಉದ್ಘಾಟನೆ ಮಾಡಿದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾದ್ಯಕ್ಷ ಬಸನಗೌಡ ಚಿಂಚೋಳಿ, ರಾಜ್ಯದಲ್ಲಿ ಸರಕಾರದವರು ರೈತರ ಹೆಸರನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ. ಸಹಕಾರಿ ಬ್ಯಾಂಕಗಳು ಭ್ರಷ್ಟರ ಖಜಾನೆಗಳಾಗಿವೆ. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರೈತರು ಯಾವುದೇ ರೀತಿಯಲ್ಲೂ ದೃತಿಗೆಡಬಾರದು. ರೈತರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಸಂಘದಿಂದ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಒಂದೇ ಗ್ರಾಮ ಶಾಖೆಗಳನ್ನು ರೈತ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಸರ್ಕಾರದ ಸೌಲಭ್ಯ ಪಡೆಯುವಂತಾಗಬೇಕು ಎಂದು ಹೇಳಿದರು.

ಸದಸ್ಯರನ್ನು ಹಸಿರು ಶಾಲು ಹೊದಿಸಿ ಹೂ ಗುಚ್ಚನೀಡಿ ಸ್ವಾಗತಿಸಲಾಯಿತು. ರೈತರು ಪ್ರಮಾಣವಚನ ಸ್ವೀಕಾರ ಮಾಡಿದರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ