ಡಾ ಸಿಎನ್ ಮಂಜುನಾಥ್ ಪ್ರಕಾರ ಮೊಬೈಲ್ ಎಲ್ಲಿ ಇಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮ

Krishnaveni K

ಬುಧವಾರ, 20 ಆಗಸ್ಟ್ 2025 (08:26 IST)
ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಇಟ್ಟುಕೊಳ್ಳದವರೇ ಇಲ್ಲ. ಏನು ಮರೆತರೂ ಮೊಬೈಲ್ ಮಾತ್ರ ಮರೆಯಲ್ಲ. ಹೀಗಿರುವಾಗ ಮೊಬೈಲ್ ಎಲ್ಲಿ ಇಟ್ಟುಕೊಂಡರೆ ಸೂಕ್ತ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಒಮ್ಮೆ ಹೀಗೆ ಸಲಹೆ ನೀಡಿದ್ದರು.

ಮೊಬೈಲ್ ಎಷ್ಟು ಉಪಯೋಗವೋ ಅಷ್ಟೇ ದುಷ್ಪರಿಣಾಮಗಳನ್ನೂ ಹೊಂದಿದೆ. ಇದರಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಮೊಬೈಲ್ ಇಟ್ಟುಕೊಳ್ಳುವಾಗ ಕೆಲವೊಂದು ಎಚ್ಚರಿಕೆ ವಹಿಸಬೇಕು.

ಹೊರಗೆ ಹೋಗುವಾಗ ಮೊಬೈಲ್ ನ್ನು ಜೇಬಿನಲ್ಲಿಟ್ಟುಕೊಳ್ಳುವ ಅಭ್ಯಾಸ ಎಲ್ಲರಿಗಿರುತ್ತದೆ. ಡಾ ಸಿಎನ್ ಮಂಜುನಾಥ್ ಪ್ರಕಾರ ಮೊಬೈಲ್ ನ್ನು ನಿಮ್ಮ ಎಡಭಾಗದ ಶರ್ಟ್ ಪಾಕೆಟ್ ನಲ್ಲಿಟ್ಟುಕೊಳ್ಳಬಾರದು. ಯಾವಾಗಲೂ ಬಲಭಾಗದ ಪಾಕೆಟ್ ನಲ್ಲಿಡಬೇಕು.

ಯಾಕೆಂದರೆ ಮೊಬೈಲ್ ನಲ್ಲಿ ಎಂಥಾ ಪ್ರಭಾವೀ ಎಲೆಕ್ಟ್ರಿಸಿಟಿ ಇದೆ ಎಂದರೆ ಅದು ಕೆಲವು ವರ್ಷಗಳ ನಂತರ ನಿಮ್ಮ ಹೃದಯಕ್ಕೆ ತೊಂದರೆ ಉಂಟು ಮಾಡಬಹುದು. ಹೀಗಾಗಿ ಮೊಬೈಲ್ ನ್ನು ಯಾವತ್ತೂ ದೇಹದ ಸೂಕ್ಷ್ಮ ಅಂಗಗಳ ಬಳಿ ಇಟ್ಟುಕೊಳ್ಳಬಾರದು. ಬೇಕಿದ್ದರೆ ನಿಮ್ಮ ಟೈಲರ್ ಬಳಿ ಶರ್ಟ್ ಹೊಲಿಸುವಾಗ ಬಲ ಭಾಗದಲ್ಲಿ ಜೇಬು ಹೊಲಿಯಲು ಹೇಳಿ ಎಂಬುದು ಅವರ ಸಲಹೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ