ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

Sampriya

ಮಂಗಳವಾರ, 19 ಆಗಸ್ಟ್ 2025 (22:34 IST)
Photo Credit X
ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ದಿನದಂದು ಸ್ಪೀಕರ್ ಯುಟಿ‌ ಖಾದರ್ ಈಚೆಗೆ ಕೃಷ್ಣನನ್ನು‌ ತೂಗಿರುವ ವಿಡಿಯೋವೊಂದು ಸಾಮಾಜಿಕ‌ ಜಾಲತಾಣದಲ್ಲಿ‌ ವೈರಲ್ ಆಗಿದೆ.  

ಈ ವಿಡಿಯೋಗೆ ನೆಟ್ಟಿಗರು ಬಗೆ ಬಗೆಯಾಗಿ‌ ಕಮೆಂಟ್ ಮಾಡಿದ್ದಾರೆ. ಕೆಲವರು ಸ್ಪೀಕರ್ ಭಾವೈಕ್ಯತೆ ಸಾರಿದ್ದಾರೆ. ರಾಜಕಾರಣಿಗಳ‌ ಈ ನಡೆ ಸಮಾಜದಲ್ಲಿ ಏಕತೆಯನ್ನು ಸಾರುತ್ತದೆ ಎಂದು ಕೊಂಡಾಡಿದ್ದಾರೆ. 

ಮತ್ತೊಂದು ಗುಂಪು ಖಾದರ್ ನಡೆಯನ್ನು‌ ಟೀಕಿಸಿದೆ. ಇನ್ನೊಂದು ಧರ್ಮವನ್ನು ಗೌರವಿಸಬೇಕು ಹೊರತು, ಆರಾಧನೆ ಮಾಡಬಾರದು ಎಂದು ಇಸ್ಲಾಮ್ ಕಳುಹಿಸಿದೆ. ವೋಟಿಗಾಗಿ ನಿಮ್ಮ‌ ಇಮಾನ್ ಅನ್ನು‌ ನಾಶ ಮಾಡಬೇಡಿ‌ ಎಂದು ಖಾದರ್ ನಡೆಗೆ ವಿರೋಧ ವ್ಯಕ್ತಪಡಿಸಿದೆ.

ಈ ಕಮೆಂಟ್ ಗೆ ಅವರ ವೈಯಕ್ತಿಕ ನಡೆಯ ಬಗ್ಗೆ ನಿಮಗ್ಯಾಕೆ ಎಂದು‌ ಮತ್ತೇ ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಯುಟಿ‌ ಖಾದರ್ ಈ ಹಿಂದೆಯೂ ಹಿಂದೂ ದೇವಸ್ಥಾನ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ