ಸಿಎಂ ಸಿದ್ದರಾಮಯ್ಯ ಮತ್ತು ಪ್ರಕಾಶ್ ರಾಜ್ ವಿರುದ್ಧ ಸಿಟಿ ರವಿ ವಾಗ್ದಾಳಿ

ಸೋಮವಾರ, 21 ಆಗಸ್ಟ್ 2023 (15:21 IST)
ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ನ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ.ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.ಅದಕ್ಕೆ ಈ ಹೇಳಿಕೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯಗೆ ಸಿಟಿ ರವಿ ತಿರುಗೇಟು ನೀಡಿದ್ದಾರೆ.
 
ಚಂದ್ರಯಾನ‌ & ಯೋಗಿ ಫೋಟೋ ಟ್ವೀಟ್ ಮಾಡಿ ಬಹುಭಾಷ‌ನಟ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿರುವುದಕ್ಕೆ  ಸಿಟಿ‌ ರವಿ ತಿರುಗೇಟು ನೀಡಿದ್ದಾರೆ.ಕೆಲವರಿಗೆ ಭಾರತದ ಅಸ್ಮಿತೆಯ ಬಗ್ಗೆ ಅಸಹನೆ‌ ಇದೆ.ಕೆಲವರಿಗೆ ಚಂದ್ರಯಾನ ಯಶಸ್ವಿಯಾದ್ರೆ,‌ ಇವರಿಗೆ‌‌ ಸಂಕಟ ಶುರುವಾಗಿದೆ.ಪ್ರಪಂಚದ ಮುಂದೆ‌ ಮೋದಿ ನಾಯಕತ್ವ ಯಶಸ್ವಿಯಾದ್ರೆ ಸಂಕಟ ಶುರುವಾಗುತ್ತೆ.ಕೆಲವರಿಗೆ‌ ಹಿಂದಗಡೆ ಮೆಣಸಿನಕಾಯಿ ಇಟ್ಕೊಂಡಂಗೆ ಆಗುತ್ತೆ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಗೆ ಸಿಟಿ ರವಿ ಕೌಂಟರ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ