ಕಮ್ಯುನಿಸ್ಟರು, ತೃಪ್ತಿ ದೇಸಾಯಿಯಂಥವರಿಂದ ಶಬರಿಮಲೆ ಪಿಕ್ ನಿಕ್ ಸ್ಥಳವಾಗಿದೆ ಸಿಟಿ ರವಿ ಆಕ್ರೋಶ

ಶನಿವಾರ, 17 ನವೆಂಬರ್ 2018 (08:55 IST)
ಬೆಂಗಳೂರು: ಶಬರಿಮಲೆ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿಟಿ ರವಿ ಕೇರಳ ಸರ್ಕಾರ, ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ವಿರುದ್ಧ ಕಿಡಿ ಕಾರಿದ್ದಾರೆ.

ಶಬರಿಮಲೆ ಎನ್ನುವುದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೇರಳ ಸರ್ಕಾರದಿಂದಾಗಿ ಮತ್ತು ತೃಪ್ತಿ ದೇಸಾಯಿಯಂಥವರಿಂದಾಗಿ ಇದು ಪಿಕ್ ನಿಕ್ ಸ್ಪಾಟ್ ನಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದೂಗಳಿಗೆ ಶಬರಿಮಲೆ ಎಂದರೆ ಇರುಮುಡಿ ಕಟ್ಟು ಕಟ್ಟಿ, ಭಕ್ತಿ, ಸೇವಾ ಮನೋಭಾವದಿಂದ ಪೂಜೆ ಮಾಡುವ ಪವಿತ್ರ ಸ್ಥಳ. ಆದರೆ ಸುಪ್ರೀಂಕೋರ್ಟ್ ಮತ್ತು ಕಮ್ಯುನಿಸ್ಟರ ಬೆಂಬಲದಿಂದಾಗಿ ವೈಯಕ್ತಿಕ ಹಿತಾಸಕ್ತಿ ಹೊಂದಿರುವ ತೃಪ್ತಿ ದೇಸಾಯಿಯಂಥವರು ಅಯ್ಯಪ್ಪನ ಸ್ಥಾನವನ್ನು ಪಿಕ್ ನಿಕ್ ಸ್ಪಾಟ್ ಮಾಡಿದ್ದಾರೆ’ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಶಬರಿಮಲೆಗೆ ಪ್ರವೇಶಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ತೃಪ್ತಿ ದೇಸಾಯಿ ನಿನ್ನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟಾನಾಕಾರರಿಂದಾಗಿ ಹೊರಬರಲಾಗದೇ ಕಾಯಬೇಕಾಯಿತು. ಇಂದು ಶಬರಿಮಲೆ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ತೃಪ್ತಿ ಈ ಹಿಂದೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ