ಕುಮಾರಸ್ವಾಮಿಯವರೇ ಇದೇನು ಕಿಚನ್ ಕ್ಯಾಬಿನೆಟಾ? ಬಿಜೆಪಿ ಲೇವಡಿ
ಅಧಿಕಾರಕ್ಕೆ ಬಂದು ಐದು ತಿಂಗಳಾಯಿತು. ರಾಜ್ಯದಲ್ಲಿ ಒಂದು ಕುಟುಂಬ ಆಡಳಿತ ಮಾಡುತ್ತಿದೆ. ರಾಜ್ಯದಲ್ಲಿ ಸರ್ಕಾರವೇ ಇದ್ದ ಹಾಗೆ ಕಾಣುತ್ತಿಲ್ಲ ಎಂದು ಬಿಜೆಪಿ ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದೆ.
ಅಲ್ಲದೆ, ರಾಜ್ಯ ಉಪಚುನಾವಣೆಗಳೆಲ್ಲಾ ಮುಗಿದವು. ನೀವೂ ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಅಂದುಕೊಳ್ಳುತ್ತೇವೆ. ಇನ್ನಾದರೂ ನಿಮಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಏನೂ ತೊಂದರೆಯಿಲ್ಲ ಎಂದುಕೊಳ್ಳುತ್ತೇವೆ. ಇಲ್ಲದಿದ್ದರೆ ಇದು ಕಿಚನ್ ಕ್ಯಾಬಿನೆಟ್ ಥರಾ ಕಾಣಿಸುತ್ತೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. ಆಷಾಢ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದಿದ್ದರೂ ಬಳಿಕ ಉಪ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ ಈ ವಿಚಾರವನ್ನು ಸಿಎಂಗೆ ಬಿಜೆಪಿ ನೆನಪಿಸಿದೆ.