ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸದ ಕೂಗು ಮುಚ್ಚಿಹಾಕಲು ಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ.
ವಿಪಕ್ಷ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿರಂತರ ನಡೆಯುತ್ತಿದೆ. ಸಾಲಮನ್ನಾ ಘೋಷಣೆಯಾದರೂ ರೈತರಿಗೆ ತಲುಪುತ್ತಿಲ್ಲ. ರಾಜ್ಯದ ಪಾಲಿಗೆ ಸರ್ಕಾರ ಉಳಿದಿಲ್ಲ ಎಂದು ಟೀಕೆ ಮಾಡಿದರು.
ಹುಟ್ಟಿದ ತಕ್ಷಣ ಸಮ್ಮಿಶ್ರ ಸರ್ಕಾರ ಸತ್ತಿದೆ. ಅಭಿವೃದ್ಧಿ ಇಲ್ಲದೆ ರಾಜ್ಯದ ಜನ ಬಡವಾಗಿದ್ದಾರೆ. ಜನಾರ್ದನ ರೆಡ್ಡಿಯನ್ನು ನಾವು ಸಮರ್ಥಿಸುವುದಿಲ್ಲ. ರೆಡ್ಡಿಯನ್ನು ಸಮರ್ಥಿಸುವ ಅಗತ್ಯ ನಮಗೆ ಇಲ್ಲ. ಆದರೆ ತರಾತುರಿ ಬಂಧನ ಮಾಡಿದ್ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನಾರ್ದನ ರೆಡ್ಡಿ ಹೇಳುತ್ತಿರುವುದು ಸತ್ಯ ಅನ್ನಿಸುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ದೇಶದ ಜನರು ರಾಮಮಂದಿರ ಅಪೇಕ್ಷೆ ಪಟ್ಟಿದ್ದಾರೆ ಎಂದಿದ್ದಾರೆ.