ನನ್ನ ಗಂಡ ಅಂತಹವರಲ್ಲ ಎನ್ನುವುದಕ್ಕೆ ಈ ಮಹಿಳೆಯರೇ ಸಾಕ್ಷಿ: ಸಿಟಿ ರವಿ ಪತ್ನಿ
ಸಿಟಿ ರವಿಗೆ ಹೈಕೋರ್ಟ್ ನಿಂದ ಬಿಡುಗಡೆ ಆದೇಶ ಸಿಗುತ್ತಿದ್ದಂತೇ ಚಿಕ್ಕಮಗಳೂರಿನ ಅವರ ತವರಿನಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿಟಿ ರವಿ ಕುಟುಂಬವೇ ಬೀದಿಗಿಳಿದು ಡ್ಯಾನ್ಸ್ ಮಾಡಿ ಸಂಭ್ರಮಿಸಿದೆ.
ಸಿಟಿ ರವಿ ಬಿಡುಗಡೆಯಾಗುತ್ತಿದ್ದಂತೇ ಪ್ರತಿಕ್ರಿಯಿಸಿದ ಅವರ ಪತ್ನಿ ಪಲ್ಲವಿ ನನ್ನ ಗಂಡ ಅಂತಹವರಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿತ್ತು. ಅವರು ಯಾವತ್ತೂ ಮಹಿಳೆಯರ ಬಗ್ಗೆ ಅಂತಹ ಪದ ಪ್ರಯೋಗಿಸುವವರೇ ಅಲ್ಲ. ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.
ಒಂದು ವೇಳೆ ಅವರು ಅಂತಹವರಾಗಿದ್ದರೆ ಅವರು ಬಂಧನವಾಗಿದ್ದಾರೆ ಎಂದು ತಿಳಿದಾಗಿನಿಂದ ಇಷ್ಟು ಜನ ನಮ್ಮ ಮನೆ ಮುಂದೆ ಬರುತ್ತಿರಲಿಲ್ಲ. ಅವರು ಅಂತಹವರಲ್ಲ ಎನ್ನುವುದಕ್ಕೆ ನಮ್ಮ ಮನೆ ಬಳಿ ಬಂದ ಮಹಿಳೆಯರೇ ಸಾಕ್ಷಿ ಎಂದಿದ್ದಾರೆ.