ಕಲರ್ ಫುಲ್ ಬಣ್ಣಗಳಿಂದ ಕಂಗೊಳಿಸಿದ ಕಬ್ಬನ್ ಪಾರ್ಕ್

ಶನಿವಾರ, 25 ಮಾರ್ಚ್ 2023 (19:44 IST)
ಯುಗಾದಿ ಹಬ್ಬ ಮುಗಿದ್ರೂ ಸಹ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಹಾಗೆ ಕಳೆಗಟ್ಟಿದೆ. ಕಬ್ಬನ್ ಪಾರ್ಕ್ ನಲ್ಲಿ ನಮ್ಮ ಬೆಂಗಳೂರು ಹಬ್ಬ 2023 ಅದ್ದೂರಿಯಾಗಿ ನಡೆಯುತ್ತಿದೆ.ಯುಗಾದಿ ಹಬ್ಬ ಕಳೆದು ಎರಡು ದಿನವಾದರೂ ಸಹ ಬೆಂಗಳೂರಿನ ಜನರು ಇನ್ನೂ ಹಬ್ಬದ ಗುಂಗಿನಲ್ಲೇ ಇದ್ದಾರೆ ಇದಕ್ಕೆ ಪೂರಕವಾಗುವಂತೆ ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನಮ್ಮ ಬೆಂಗಳೂರು ಉತ್ಸವ 2023 ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿತು ಎರಡು ದಿನಗಳ ಕಾಲ ನಡೆಯುವ ಈ ಬೆಂಗಳೂರು ಹಬ್ಬಕ್ಕೆ ಇಂದು ಕಂದಾಯ ಸಚಿವರು ಆರ್ ಅಶೋಕ್ ಅವರು ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಮಹೇಶ್ ಖರ್ಚಗಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಉಪಸ್ಥಿತರಿದ್ದರು.

ಇನ್ನೂ..ಐದು ವರ್ಷಗಳ ನಂತರ ನಡೆಯುತ್ತಿರುವ ಬೆಂಗಳೂರು ಹಬ್ಬವನ್ನು ಕರ್ನಾಟಕದಲ್ಲಿ ನೆಲೆಸಿರುವ ಬೇರೆ ರಾಜ್ಯ ಹಾಗೂ ದೇಶದ ಜನರಿಗೆ ಕನ್ನಡ ನಾಡಿನ ಪರಂಪರೆ ಹಾಗೂ ಅದರ ವಿಶಿಷ್ಟ ಗಳನ್ನು ತಿಳಿಸುವ ಸಲುವಾಗಿ ಆಯೋಜಿಸಲಾಗಿತ್ತು. ಇನ್ನು ಈ ಬೆಂಗಳೂರು ಉತ್ಸವ ಸಾಕಷ್ಟು ವಿಶಿಷ್ಟಗಳಿಂದ ಕೂಡಿದ್ದು ಒಂದೆಡೆ ಡೊಳ್ಳು ಕುಣಿತದವರು ಕುಣಿದರೆ ಮತ್ತೊಂದೆಡೆ ಕೋಲಾಟ, ಯಕ್ಷಗಾನ, ಬೊಂಬೆ ವೇಷ, ಹೀಗೆ ಸುಮಾರು 50ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು. ಹಾಗೆಯೇ 150ಕ್ಕೂ ಹೆಚ್ಚು ಸ್ಟಾಲ್ಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಈ ಬಾರಿಯ ಬೆಂಗಳೂರು ಹಬ್ಬವು ಕಲಾಸಕ್ತರಿಗೆ ಹಾಗೂ ಕಲಾ ಪ್ರೇಮಿಗಳಿಗೆ ಹಾಟ್ ಸ್ಪಾಟ್ ಆಗಿತ್ತು.ಇಷ್ಟೇ ಅಲ್ಲದೆ ಬೆಂಗಳೂರು ಹಬ್ಬಕ್ಕೆ ಬಂದ ಜನರಿಗೆ ವಿಶಿಷ್ಟವಾದ ತಿಂಡಿ ತಿನಿಸುಗಳು ಕೂಡ ಸಿಕ್ಕಿತ್ತು ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮಗಿಷ್ಟವಾದ ತಿನಿಸು ತಿಂದು ಖುಷಿ ಪಟ್ಟರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ