ಕಬ್ಬನ್‌ ಪಾರ್ಕ್ ಇನ್ಮುಂದೆ ನಿಶ್ಯಬ್ದ ವಲಯ

ಸೋಮವಾರ, 14 ನವೆಂಬರ್ 2022 (18:01 IST)
ಕಬ್ಬನ್ ಉದ್ಯಾನವು ಬಹು ಹಿಂದಿನಿಂದಲೂ ಹತ್ತಾರು ಬಗೆಯ ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಕರ್ಕಶ ಹಾರ್ನ್‌ನಿಂದಾಗಿ ಪಕ್ಷಿಗಳು ಭಯದಿಂದ ಹಾರಿ ಹೋಗುತ್ತವೆ. ಹೀಗಾಗಿ ಉದ್ಯಾನದ ಕೆಲವು ಭಾಗಗಳನ್ನಾದರೂ ನಿಶ್ಯಬ್ದವಾಗಿಡಲು 16 ನಿಗದಿತ ಜಾಗಗಳಲ್ಲಿ'ನಿಶ್ಯಬ್ದ ವಲಯ' ಎಂದು ಫಲಕಗಳನ್ನು ಹಾಕಲಾಗಿದೆ. ಕಬ್ಬನ್‌ ಉದ್ಯಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಾರ್ನ್‌ ಮಾಡಿದರೆ ದಂಡ ತೆರಬೇಕಾಗುತ್ತದೆ . ಕಬ್ಬನ್‌ ಉದ್ಯಾನವನದ ಎಲ್ಲ ಎಂಟು ಪ್ರವೇಶ ದ್ವಾರಗಳು, ಗ್ರಂಥಾಲಯ ಸೇರಿ ಆಯ್ದ 16 ನಿಗದಿತ ಜಾಗಗಳಲ್ಲಿ'ನಿಶ್ಯಬ್ದ ವಲಯ' ಎಂದು ಫಲಕಗಳನ್ನು ಹಾಕಲಾಗಿದೆ. ಹೀಗಾಗಿ ಈ ಫಲಕ ಇರುವೆಡೆ ವಾಹನ ಸವಾರರು ಹಾರ್ನ್‌ ಮಾಡುವಂತಿಲ್ಲ. ಒಂದೊಮ್ಮೆ ನಿಯಮ ಉಲ್ಲಂಘಿಘಿಸಿದರೆ, ದಂಡ ತೆರಬೇಕಾಗುತ್ತದೆ. ಇಂಥದ್ದೊಂದು ಮಹತ್ವದ ಆದೇಶವನ್ನು ತೋಟಗಾರಿಕೆ ಇಲಾಖೆ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ