ಕೇಂದ್ರ ಸರಕಾರ ಬಡವರ ಸಾಲ ಮನ್ನಾ ಮಾಡಿಲ್ಲ. ಆದರೆ, ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಕೇವಲ ಕೈಗಾರಿಕೆ ಕ್ಷೇತ್ರದ ಸಾಲ ಮನ್ನಾ ಮಾಡುತ್ತಿರುವುದು ಏಕೆ? ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡಿ. ಕೇವಲ ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವುದನ್ನು ಗಮನಿಸಿದರೆ ನೋಟ್ ಬ್ಯಾನ್ ಒಂದು ರಾಜಕೀಯ ಗಿಮಿಕ್ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಹೊಂದಿರುವವರು ಆದಾಯ ತೆರಿಗೆ ಮಾಡುವಂತಿಲ್ಲ. ಸ್ವಂತ ಕಾರು ಹಾಗೂ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವಂತಿಲ್ಲ. ತಮ್ಮ ಖಾತೆಗೆ 2.5 ಲಕ್ಷ ಹಣ ಜಮೆ ಮಾಡಿದರೆ ಟ್ಯಾಕ್ಸ್ ಬೀಳುತ್ತೆ. ಹೀಗಾಗಿ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದರು.