ಯಡಿಯೂರಪ್ಪರಿಗೆ ಪರೋಕ್ಷ ಚಾಟಿ ಬೀಸಿದ ಡಿ.ವಿ.ಸದಾನಂದಗೌಡ

ಶನಿವಾರ, 18 ಜೂನ್ 2016 (13:08 IST)
ಒಂದು ಕಾಲದಲ್ಲಿ ರಾಜ್ಯದಲ್ಲಿ ಉತ್ತಮ ಅಡಳಿತ ನೀಡಿದ್ದೇವು ನಂತರ ನಡೆದ ಬೆಳವಣಿಗೆಗಳು ಸರಿಯಿರಲಿಲ್ಲ. ಇನ್ಮುಂದೆ ಇಂತಹ ವಿದ್ಯಾಮಾನಗಳು ನಡೆಯಬಾರದು, ಎಂದು ಬಿಜೆಪಿ ನಾಯಕರಿಗೆ ಸದಾನಂದಗೌಡ ಪರೋಕ್ಷವಾಗಿ ಚಾಟಿ ಏಟು ಬೀಸಿದ್ದಾರೆ.
 
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಸಾಕಾರಗೊಳಿಸಲು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದು ಅಭಿವೃದ್ಧಿಪಥದಲ್ಲಿ ಸಾಗಬೇಕಾಗಿದೆ ಎಂದರು.
 
 ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯೇ ಮುಖ್ಯ ಅಜೆಂಡಾವಾಗಿದೆ. ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಸಂಕಲ್ಪ ತೊಡಬೇಕಾಗಿದೆ ಎಂದು ಕರೆ ನೀಡಿದರು.
 
ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಿತ್ತೊಗೆಯಲು 2ವರ್ಷ ಸಮಯ ನೀಡಬೇಕಾಗಿದೆ. ರಾಜ್ಯಸರಕಾರ ಬರಗಾಲ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
 
ರಾಜ್ಯದಲ್ಲಿ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾಗುತ್ತಿರುವುದು ನೋಡಿದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ