ದಲಿತ ಮಹಿಳೆಗೆ ಕಿರುಕುಳ ಪ್ರಕರಣ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ದೇವೇಗೌಡರು

ಮಂಗಳವಾರ, 24 ಮೇ 2016 (17:22 IST)
ಸಿಎಂ ಜನತಾದರ್ಶನದಲ್ಲಿ ದಲಿತ ಮಹಿಳೆಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಏನೇ ಮಾಡಿದರು  ಮಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಪ್ರೇರಿತ ಎಂದು ಹೇಳುತ್ತಾರೆಂದು ಜೆಡಿಎಸ್‌ ವರಿಷ್ಠ ದೇವೇಗೌಡ ತಿರುಗೇಟು ನೀಡಿದ್ದಾರೆ.
 
ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ದಲಿತ ಮಹಿಳೆ ಸವಿತಾ ಅವರನ್ನು ವಿಧಾನಸೌಧಕ್ಕೆ ಕರೆತಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ನಾವು ಎನೇ ಮಾಡಿದರು ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರೇರಿತ ಎಂದು ಹೇಳುತ್ತಾರೆ. ಇಂತಹ ಗಂಭೀರವಾದ ವಿಚಾರದಲ್ಲಿ ಯಾರು ರಾಜಕೀಯ ಮಾಡುವುದಿಲ್ಲ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು  ಸಿದ್ದರಾಮಯ್ಯನವರಿಗೆ ತೀರುಗೇಟು ನೀಡಿದ್ದಾರೆ.
 
ನೊಂದ ದಲಿತ ಮಹಿಳೆ ಸವಿತಾ ಸ್ವಾಭಿಮಾನದ ಜೀವನ ನಡೆಸಲು ಹೋರಾಡುತ್ತಿದ್ದಾಳೆ. ಈ ಘಟನೆಯ ಬಳಿಕ ಆಕೆಯ ಪತಿ ಮುತ್ತುರಾಜ ಅವರಿಗೆ ಯಾರು ಬಾಡಿಗೆ ಆಟೋ ನೀಡುತ್ತಿಲ್ಲ. ಅವರ ಜೀವನ ನಡೆಯುವುದಾದರು ಹೇಗೆ. ಆಕೆಯ ಅಳಲಿಗೆ ಸ್ಪಂದಿಸಿ ನಾನೇ ಸ್ವಂತ ಖರ್ಚಿನಲ್ಲಿ ಆಟೋ ನೀಡುತ್ತೇನೆ ಎಂದು ಪದ್ಮನಾಭನಗರದ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅಭಯ ಹಸ್ತ ನೀಡಿದ್ದಾರೆ.
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ