ಕಿಂಗ್ ಫಿಷರ್​​​​​ನಲ್ಲಿ ಅಪಾಯಕಾರಿ ಅಂಶ ಪತ್ತೆ

ಗುರುವಾರ, 17 ಆಗಸ್ಟ್ 2023 (18:30 IST)
ಮೈಸೂರಿನ ಕಿಂಗ್ ಫಿಷರ್ ಬಿಯರ್​​ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ.ಬಿಯರ್​ನಲ್ಲಿ ಅಪಾಯಕಾರಿ ಸೆಡಿಮೆಂಟ್ ಇರುವ ಬಗ್ಗೆ ಲ್ಯಾಬ್​ನಲ್ಲಿ ದೃಢವಾಗಿದ್ದು, ಈ ಬಿಯರ್​​ ಬಾಕ್ಸ್​ಗಳನ್ನ ವಿವಿಧ KSBCL ಹಾಗೂ RVB ಸನ್ನದುದಾರರಿಗೆ ಸಾಗಣೆ ಮಾಡಲಾಗಿದೆ. ನಂಜನಗೂಡಿನ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಈ ಬಿಯರ್​ನ್ನು ತಯಾರಿಸಿದ್ದು, ಅಂಗಡಿಗಳಿಗೆ ವಿತರಣೆ ಮಾಡದಂತೆ ಸೂಚನೆ‌ ನೀಡಲಾಗಿದೆ. ಸದ್ಯ ಈ‌ ಬಿಯರ್ ವಿತರಣೆ ಮಾಡದಂತೆ ಅಬಕಾರಿ‌ ಇಲಾಖೆ‌ಯಿಂದ ಸುತ್ತೋಲೆ ಹೊರಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ