ಅತಿಯಾದ ಮಳೆಗೆ ಬೆಳೆ ನಾಶಗೈದ ರೈತ..!

ಗುರುವಾರ, 17 ಆಗಸ್ಟ್ 2023 (18:00 IST)
ಅತಿವೃಷ್ಠಿಯಿಂದ ದನಗಳ ಜೋಳಕ್ಕೆ ಸೈನಿಕ ರೋಗ ತಗುಲಿದ್ದಕ್ಕೆ ರೈತನೊಬ್ಬ ಸಂಪೂರ್ಣ ಬೆಳೆಯನ್ನೇ ನಾಶ ಮಾಡಿರುವ ಘಟನೆ ಹಾವೇರಿಯ ಕರ್ಜಗಿಯಲ್ಲಿ ನಡೆದಿದೆ. 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನ ಜೋಳವನ್ನ ಕರ್ಜಗಿ ಗ್ರಾಮದ ರೈತ ನಾಗಪ್ಪ ಎಂಬುವವರು ಸಂಪೂರ್ಣ ಬೆಳೆಯನ್ನ ಟ್ರ್ಯಾಕ್ಟರ್​ನಿಂದ ನಾಶ ಮಾಡಿದ್ದಾರೆ. ಅತಿಯಾದ ಮಳೆಗೆ ಒಂದೂವರೆ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬೆಳೆಗೆ ರೋಗ ತಗುಲಿತ್ತು. ಇದೀಗ ಅದನ್ನ ನಾಗಪ್ಪ ನಾಶ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ