ಪ್ರೇಮಿಗಳ ದಿನದಂದೇ DC-CEO ಮದುವೆ!
ಪರಸ್ಪರ ಪ್ರೀತಿಸುತ್ತಿದ್ದ ಜಿಲ್ಲಾಧಿಕಾರಿ ಹಾಗೂ ಸಿಇಓ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಾಂಪತ್ಯ ಜೀವನಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಲಿಡಲಿದ್ದಾರೆ.
ಪ್ರೇಮಿಗಳ ದಿನದಂದೆ ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಜಿಪಂ ಸಿಇಓ ಅಶ್ವತಿ ಎಸ್. ಸತಿಪತಿಗಳಾಗಿದ್ದಾರೆ.
ಪ್ರೀತಿಸಿ ಮದ್ವೆಯಾಗುತ್ತಿರುವ ಆಂಧ್ರಪ್ರದೇಶ ಹಾಗೂ ಕೇರಳ ಮೂಲದ ಐಎಎಸ್ ಜೋಡಿ ಇದಾಗಿದೆ.
ಕೇರಳದ ಕೋಯಿಕ್ಕೋಡ್ ನಲ್ಲಿ ಮದುವೆ ನಡೆಯಲಿದೆ. ವಧುವಿನ ಸ್ವಸ್ಥಳ ಕೋಯಿಕ್ಕೋಡ್. ವರ ಡಾ.ಬಗಾದಿ ಗೌತಮ್ ಸ್ವಸ್ಥಳ ವಿಶಾಖಪಟ್ಟಣಂ ಆಗಿದೆ.
ಎರಡು ಕುಟುಂಬ ಸದಸ್ಯರು ಹಾಗೂ ದಾವಣಗೆರೆ ಮತ್ತು ರಾಯಚೂರುನಿಂದ 100 ಜನ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದೇ 17 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಆರತಕ್ಷತೆ ನಡೆಯಲಿದೆ.