ಸಿಎಂ ಮಂಡಿಸಿದ ಬಜೆಟ್ ಗಾತ್ರ ಎಷ್ಟಿದೆ ಗೊತ್ತಾ?

ಶುಕ್ರವಾರ, 8 ಫೆಬ್ರವರಿ 2019 (15:46 IST)
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೊದಲ ಬಜೆಟ್ ನ್ನು ಹಲವು ಅಡೆತಡೆಗಳ ನಡುವೆಯೇ ಸಿಎಂ ಮಂಡನೆ ಮಾಡುವಲ್ಲಿ ಸಫಲರಾಗಿದ್ದಾರೆ.

ಈ ಬಾರಿಯ ಆಯವ್ಯದ ಗಾತ್ರ 2,34,153 ಕೋಟಿ ರೂ.ಗಳದ್ದಾಗಿದೆ. ಇದರಲ್ಲಿ ಒಟ್ಟು ಸ್ವೀಕೃತಿ 2,30,738 ಕೋಟಿ ರೂ.ಗಳಿದ್ದರೆ, ರಾಜಸ್ವದಿಂದ 1.81.863 ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ.

48.601 ಕೋಟಿ ರೂ. ಸಾರ್ವಜನಿಕ ಋಣ ಹಾಗೂ 48,876 ಕೋಟಿ ರೂ. ಬಂಡವಾಳ ಸ್ವೀಕೃತಿಯಿಂದ ಸಂಗ್ರವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೃಷಿ ಸಾಲ ಮನ್ನಾಕ್ಕೆ 6500 ಕೋಟಿ ರೂ. ಮೀಸಲಿಡಲಾಗಿದ್ದು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಕ್ಕೆ 46,853 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಎಸ್ಟಿ ಅಡಿಯಲ್ಲಿ 76,406 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷಿತ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ