ಆಟೋರಿಕ್ಷಾಗಳಿಗೆ ಹೋಲೋಗ್ರಾಂ ಅಳವಡಿಕೆಗೆ ಕಡ್ಡಾಯ ಎಂದ ಡಿಸಿ

ಸೋಮವಾರ, 8 ಅಕ್ಟೋಬರ್ 2018 (16:11 IST)
ಮಹಾನಗರದಲ್ಲಿ ಪರವಾನಿಗೆ ಇಲ್ಲದ ಆಟೋರಿಕ್ಷಾಗಳ ಓಡಾಟವನ್ನು ತಡೆಯುವ ನಿಟ್ಟಿನಲ್ಲಿ ಪರವಾನಿಗೆ ಪಡೆದ ಆಟೋರಿಕ್ಷಾಗಳಿಗೆ 15 ದಿನದೊಳಗಾಗಿ ಹೋಲೋಗ್ರಾಂ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಡಿಸಿ ಆರ್.ವೆಂಕಟೇಶ್ ಕುಮಾರ, ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಟ್ರಾಫೀಕ್ ಪೊಲೀಸ್ ಅಧಿಕಾರಿ, ಆಟೋರಿಕ್ಷಾ ಯೂನಿಯನ್ ಅಧ್ಯಕ್ಷರು ಹಾಗೂ ಎನ್.ಇ.ಕೆ.ಆರ್.ಟಿ.ಸಿ. ಡಿವಿಜನ್-1ರ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕು. 15 ದಿನದೊಳಗಾಗಿ ನಗರದಲ್ಲಿ ಪ್ರೀಪೇಡ್ ಆಟೋಸ್ಟ್ಯಾಂಡ್, ಆಟೋಗಳಿಗೆ ದರ ನಿಗದಿ,  ಆಟೋರಿಕ್ಷಾ ನಿಲ್ದಾಣಗಳನ್ನು ಗುರುತಿಸಿ ನಕ್ಷೆ ತಯಾರಿಸಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಪರವಾನಿಗೆ ಇಲ್ಲದೇ ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳನ್ನು ಟ್ರಾಫೀಕ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತಿದಿನ ತಪಾಸಣೆ ಕೈಗೊಂಡು ದಂಡ ವಿಧಿಸಬೇಕು ಹಾಗೂ ಪರವಾನಿಗೆ ಇಲ್ಲದ ಆಟೋರಿಕ್ಷಾಗಳ ಚೆಸ್ಸಿ, ಇಂಜಿನ್ ಹಾಗೂ ವಾಹನ ನೋಂದಣಿ ಸಂಖ್ಯೆ ನಮೂದಿಸಿಕೊಳ್ಳಬೇಕು. ಈ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ದಾಖಲಿಸಿದಲ್ಲಿ ತಪಾಸಣೆ ಕೈಗೊಂಡಾಗ ದಂಡ ಭರಿಸಿ ಮತ್ತೆ ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳ ಮಾಹಿತಿ ನಿಖರವಾಗಿ ಲಭ್ಯವಾಗುತ್ತದೆ. ಎರಡನೇ ಬಾರಿ ದಂಡಕ್ಕೆ ಒಳಗಾಗುವ ಆಟೋರಿಕ್ಷಾಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ