ರಾಜ್ಯದಲ್ಲಿ ಎಲ್ಲ ಇವಿಎಂಗಳಿಗೆ ಚುನಾವಣೆ ಆಯೋಗದಿಂದ ವಿವಿಪಿಎಟಿ ಅಳವಡಿಕೆ
ಶುಕ್ರವಾರ, 22 ಡಿಸೆಂಬರ್ 2017 (10:32 IST)
ಇವಿಎಂ ಹ್ಯಾಕ್ ಆಗೋಕೆ ಸಾಧ್ಯವೇ ಇಲ್ಲ ಎನ್ನುತ್ತಿರುವ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಆರೋಪ ಮುಕ್ತವಾಗಿ ನಡೆಸಲು ಎಲ್ಲಾ ಇವಿಎಂಗಳಿಗೂ ವಿವಿಪಿಎಟಿ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಳವಡಿಕೆ ಮಾಡಲು ಮುಂದಾಗಿದೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಕಂಡ ನಂತರ ಇವಿಎಂ ಮಷೀನ್ ಬಗ್ಗೆ ಕಾಂಗ್ರೆಸ್ ನಾಯಕರ ಅನುಮಾನ ಹೆಚ್ಚಾಗಿದೆ. ಮತಪತ್ರದ ಮೂಲಕ ಚುನಾವಣೆ ನಡೆಸಲು ಕಾಂಗ್ರೆಸ್ ಒತ್ತಾಯಿಸಿದೆ. ಆದರೆ, ಚುನಾವಣೆ ಆಯೋಗ ಇವಿಎಂ ಇವಿಎಂ ಹ್ಯಾಕ್ ಮಾಡಲು ಆಗಲ್ಲ ಎಂದಿದೆ.
ಇವಿಎಂ ಸರಿ ಇಲ್ಲ ಎಂಬ ಆಪಾದನೆಯಿಂದ ಮುಕ್ತಿ ಹೊಂದಲು ಮುಂದಾಗಿರೋ ರಾಜ್ಯ ಚುನಾವಣಾ ಆಯೋಗ, ವಿಧಾನಸಭೆ ಚುನಾವಣೆಯನ್ನ ಸೂಕ್ಷ್ಮ ಭದ್ರತೆಯಲ್ಲಿ ಮಾಡಲು ನಿರ್ಧರಿಸಿದೆ. ಇವಿಎಂ ಹ್ಯಾಕ್ ಆರೋಪ ಮುಕ್ತ ಮಾಡಲು ಎಲ್ಲಾ 224 ಕ್ಷೇತ್ರಗಳಲ್ಲಿ ವಿವಿಪಿಎಟಿ ಅಳವಡಿಕೆಗೆ ನಿರ್ಧಾರ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.