ಸರ್ಕಾರ ಹೊಸ ಯೋಜನೆಗಳನ್ನು ಕೈಗೊಳ್ಳದಿರಲು ಕಾರಣ ಬಿಚ್ಚಿಟ್ಟ ಡಿಸಿಎಂ ಅಶ್ವತ್ ನಾರಾಯಣ

ಶುಕ್ರವಾರ, 25 ಅಕ್ಟೋಬರ್ 2019 (11:39 IST)
ಮಂಗಳೂರು : ಸಾಲಮನ್ನಾ ಹಾಗೂ ಪ್ರವಾಹ ಪರಿಹಾರಕ್ಕೆ ಹಣ ಹೊಂದಿಸಬೇಕು. ಹೀಗಾಗಿ ಹೊಸ ಯೋಜನೆಗಳನ್ನು ಕೈಗೊಳ್ಳಲು ಬಜೆಟ್ ನಲ್ಲಿ ಹಣ ಸಾಕಾಗಲ್ಲ ಎಂದು ಡಿಸಿಎಂ ಅಶ್ವತ್ ನಾರಾಯಣ ಹೇಳಿದ್ದಾರೆ.




ಮಂಗಳೂರಿನ ಏರ್ ಪೋರ್ಟ್ ನಲ್ಲಿ ಮಾತನಾಡಿದ ಅವರು, 40 ಸಾವಿರ ಕೋಟಿ ಸಾಲ ಮನ್ನಾಕ್ಕಾಗಿ ಹಣ ತೊಡಗಿಸಬೇಕಿದೆ. ಹಿಂದಿನ ಸರ್ಕಾರ ಕೇವಲ 15 ಸಾವಿರ ಕೋಟಿಯಷ್ಟೆ ಕೊಟ್ಟಿದೆ. ಈ ಬಾರಿ ನೆರೆ ಬಂದಿರುವುದರಿಂದ ಹಣ ಹೊಂದಿಸಬೇಕಾಗಿದೆ ಎಂದು ಹೇಳಿದ್ದಾರೆ.


ಉಪಚುನಾವಣೆಯಲ್ಲಿ ಬಿಜೆಪಿಗೆ ಎದುರಾಳಿಗಳೇ ಇಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ಅನರ್ಹರಿಗೆ ಸೋಲಾದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಫಲಿತಾಂಶ ರಾಜ್ಯದಲ್ಲಿ ಪರಿಣಾಮ ಬೀರುವುದಿಲ್ಲ.  ಉಪಚುನಾವಣೆಯಲ್ಲಿ 15 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್, ಜೆಡಿಎಸ್ ಯಾವ ಸ್ಥಿತಿಯಲ್ಲಿದೆ ಅನ್ನೋದು ಗೊತ್ತಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ