'ನೆರೆ ಛಾಯೆ' ಛಾಯಾಚಿತ್ರ ಪ್ರದರ್ಶನ: ಭೀಕರ ಚಿತ್ರಗಳ ಅನಾವರಣ

ಗುರುವಾರ, 17 ಅಕ್ಟೋಬರ್ 2019 (19:13 IST)
ನೆರೆ ಬಂದು ಲಕ್ಷಾಂತರ ಜನರ ಬದುಕು ಬಿದ್ದಿದೆ. ಇದೀಗ ನಿಧಾನವಾಗಿ ಹೊಸ ಬದುಕು ಅಂಬೆಗಾಲು ಇಡುತ್ತ ಶುರುವಾಗುತ್ತಿದೆ. ಈ ನಡುವೆ ಪ್ರವಾಹ ಸಂತ್ರಸ್ಥರ ಬದುಕು, ಚಿತ್ರಣದ ಪ್ರದರ್ಶನ ಏರ್ಪಡಿಸಲಾಗಿದೆ.

ಹುಬ್ಬಳ್ಳಿಯ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ನೆರೆ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಅಕ್ಟೋಬರ್ 19, 20 ಕ್ಕೆ ಇಂದಿರಾ ಗಾಜಿನ ಮನೆಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಹೀಗಂತ ಕಿರಣ ಬಾಕಳೆ ಹೇಳಿದ್ದಾರೆ.

ಛಾಯಾ ಚಿತ್ರ ಪ್ರದರ್ಶನವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಲಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಶಾಸಕ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ, ಪೊಲೀಸ್ ಆಯುಕ್ತರಾದ ಆರ್. ದಿಲಿಪ್ ಪಾಲ್ಗೊಳ್ಳಲಿದ್ದಾರೆ.

ಛಾಯಾಗ್ರಹಣ ಮಾಡಿದ ಕಲಾವಿದರು ತಮ್ಮ ಜೀವದ ಹಂಗು ತೊರೆದು ನೆರೆ ಚಿತ್ರಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಪ್ರದರ್ಶನಕ್ಕೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ