ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡ ಡಿಸಿಎಂ

ಶುಕ್ರವಾರ, 15 ಮಾರ್ಚ್ 2019 (14:38 IST)
ಬೆಂಗಳೂರು : ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜೆಡಿಎಸ್ ಪಟ್ಟಿಯಲ್ಲೇ ಇರಲಿಲ್ಲ. ಜೆಡಿಎಸ್‍ ನವರಿಗೆ ಹೇಗೆ ಕ್ಷೇತ್ರ ಬಿಟ್ಟು ಕೊಟ್ರೋ ಗೊತ್ತಿಲ್ಲ. ಹೀಗಾಗಿ ಇದೀಗ ತುಮಕೂರು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧವೇ ಉಪಮುಖ್ಯಮಂತ್ರಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ಮುದ್ದಹನುಮಗೌಡ ಅವರು ಹಾಲಿ ಸಂಸರಾಗಿದ್ದಾರೆ. ನಮ್ಮಲ್ಲಿ 10 ಜನ ನಮ್ಮ ಪಕ್ಷದವರು ಸಿಟ್ಟಿಂಗ್ ಎಂಪಿಗಳಿದ್ದಾರೆ. ಆ 10 ಜನಕ್ಕೂ ಟಿಕೆಟ್ ಕೊಡಬೇಕು ಎಂದು ವರಿಷ್ಠರ ಜೊತೆ ಚರ್ಚೆ ಮಾಡುವಾಗ ಪ್ರಸ್ತಾಪ ಮಾಡಿದ್ದೆವು. ಆದ್ರೆ ಈಗ ತುಮಕೂರನ್ನು ಬಿಟ್ಟುಕೊಟ್ಟಿದ್ದಾರೆ. ಅದು ನಮಗೆ ಬೇಕು. ನಮ್ಮ ಸಿಟ್ಟಿಂಗ್ ಎಂಪಿ ಇದ್ದಾರೆ ಎಂದು ನಾನು ಕೇಳುತ್ತಿದ್ದೇನೆ ‘ಎಂದು ಹೇಳಿದ್ದಾರೆ.


‘ಈ ಕುರಿತು ಗುರುವಾರ ದೇವೇಗೌಡರನ್ನು ನಾನು ಭೇಟಿ ಮಾಡಿದ್ದೆ. ಇಂದು ಮುಖ್ಯಮಂತ್ರಿಗಳನ್ನು ಕೂಡ ಭೇಟಿ ಮಾಡುತ್ತೇನೆ. ನಮಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ ಮುದ್ದಹನುಮೇಗೌಡ ಕಳೆದ 5 ವರ್ಷಗಳಿಂದ ಕೆಲಸ ಮಾಡಿದ್ದಾರೆ. ನಾವು ಬೆಂಗಳೂರಿಗೆ ಬಂದ ಬಳಿಕ ದೆಹಲಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ