ಡಿಸಿಎಂ ಮನೆಗೆ ಮುತ್ತಿಗೆ ಹಾಕಿ ಚಳಿ ಬಿಡಿಸಿದ ಜನರು!

ಶುಕ್ರವಾರ, 25 ಅಕ್ಟೋಬರ್ 2019 (14:43 IST)
ಡಿಸಿಎಂ ಸ್ವಕ್ಷೇತ್ರದ ಜನರು ಉಪಮುಖ್ಯಮಂತ್ರಿ ನಿವಾಸದಲ್ಲಿ ಇರೋವಾಗಲೇ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.

ಶಾಶ್ವತ ಸೂರು ಕಲ್ಪಿಸುವಂತೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆಗೆ ಸಂತ್ರಸ್ತರು  ಮುತ್ತಿಗೆ ಹಾಕಿದ್ರು.

ಬೆಳ್ಳಂಬೆಳಿಗ್ಗೆ ಕಾರಜೋಳ ಅವರ ಮನೆಗೆ  ಸಂತ್ರಸ್ತರು ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಬಿಸಿ ಮುಟ್ಟಿಸಿ ಚಳಿ ಬಿಡಿಸಿದರು. ಯುಕೆಪಿ ಮಾದರಿಯಲ್ಲಿ  ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.  ನೆರೆ ಸಂತ್ರಸ್ತರು ಮಳೆಗೆ ನಲುಗಿ ಹೋಗಿದ್ದು, ಸತತ ಮಳೆಯಿಂದಾಗಿ ಮನೆಯಲ್ಲಿ ಜೀವಭಯದಿಂದ ಮಲಗುವ ಪರಿಸ್ಥಿತಿ ಎದುರಾಗಿದೆ.

ಅಲ್ಲದೇ  ಸೂಕ್ತ ಮನೆಯಿಲ್ಲದೇ  ಮಕ್ಕಳು, ವಯೋವೃದ್ಧರ ಸ್ಥಿತಿ ಚಿಂತಾಜನಕವಾಗಿದೆ. ದಿನದಿಂದ ದಿನಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಶೀಘ್ರವೇ    ಸಂತ್ರಸ್ತರಿಗೆ ಸೂಕ್ತ ಹಾಗೂ ಶಾಶ್ವತ ಸ್ಥಳಕ್ಕೆ ಸ್ಥಳಾಂತರ ಮಾಡಿ ಸೂರು ಒದಗಿಸಬೇಕೆಂದು ಮನವಿ ಮಾಡಿದರು.
 ಇದೇ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ,  ಶೀಘ್ರದಲ್ಲಿಯೇ ನೆರೆ ಸಂತ್ರಸ್ತರನ್ನ ಶಾಶ್ವತ ಸ್ಥಳಕ್ಕೆ ಸ್ಥಳಾಂತರ ಮಾಡಿ ಸೂಕ್ತ ಸೂರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ