ಡಿಸಿಎಂ ಸಭೆಗೆ ಕ್ಯಾರೇ ಅನ್ನದ ಅಧಿಕಾರಿಗಳು ; ಮೊಬೈಲ್ ನಲ್ಲಿ ಅಂಥ ಡ್ಯಾನ್ಸ್ ನೋಡೋದ್ರಲ್ಲಿ ಬ್ಯುಸಿ
ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ಗಳಲ್ಲಿ ಅಂಥ ಡ್ಯಾನ್ಸ್ ವಿಡಿಯೋ ನೋಡುವುದರಲ್ಲಿ ಮಗ್ನರಾಗಿರೋದು ಬೆಳಕಿಗೆ ಬಂದಿದೆ.
ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್ ರಿಂದ ಕೆಡಿಪಿ ಸಭೆ ನಡೆಯಿತು. ಆದರೆ ಸಭೆಯಲ್ಲಿ ಅಧಿಕಾರಿಗಳು ಮಾತ್ರ ಮೊಬೈಲ್ ನಲ್ಲಿ ಫುಲ್ ಆಟವೋ ಆಟದಲ್ಲಿ ತೊಡಗಿಕೊಂಡಿದ್ರು.
ಡ್ಯಾನ್ಸ್ ವಿಡಿಯೋ ಜೊತೆಗೆ ಗೇಮ್ಸ್ ಆಡುತ್ತಿದ್ದರು ಅಧಿಕಾರಿಗಳು. ಡಿಸಿಎಂ ಸಭೆಗೆ ಖ್ಯಾರೇ ಅನ್ನದ ರಾಮನಗರ ಜಿಲ್ಲಾ ಅಧಿಕಾರಿಗಳ ನಡೆ ಚರ್ಚೆಗೆ ಕಾರಣವಾಗಿದೆ.