ಉದ್ಧವ್ ಠಾಕ್ರೆ ಟ್ವೀಟ್ ಗೆ ಡಿಸಿಎಂ ಲಕ್ಷ್ಮಣ್ ಸವದಿ ಕಿಡಿ

ಸೋಮವಾರ, 18 ಜನವರಿ 2021 (10:53 IST)
ದಾವಣಗೆರೆ : ಬೆಳಗಾವಿ ನಮ್ಮದು ಎಂದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಗೆ ಡಿಸಿಎಂ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.
 

ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದೊಂದು ರಾಜಕೀಯ , ಅವಿವೇಕಿತನದ ಹೇಳಿಕೆಯಾಗಿದೆ. ಒಬ್ಬ ಸಿಎಂ ಆಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ನಮ್ಮ ರಾಜ್ಯದ 2ನೇ ರಾಜ‍ಧಾನಿ, ಅವಿಭಾಜ್ಯ ಅಂಗ. ಅದನ್ನು ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ