ಲೋಕಲ್ ಫೈಟ್: ಕಲಬುರಗಿಯಲ್ಲಿ ಖರ್ಗೆ ಕೈಮೇಲು- ಗುತ್ತೇದಾರ್ ಗೆ ಹಿನ್ನಡೆ
ಸೋಮವಾರ, 3 ಸೆಪ್ಟಂಬರ್ 2018 (18:40 IST)
ಕಲಬುರಗಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ 169 ವಾರ್ಡುಗಳ ಪೈಕಿ ಅಫಜಲಪುರ ಪುರಸಭೆಯ ವಾರ್ಡು 19ರಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿರುವ ಕಾರಣ ಸ್ಪರ್ಧೆ ನಡೆದ 168 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಕೈ ಮತ್ತೆ ಮೇಲಾಗಿದ್ದರೆ, ಮಾಜಿ ಶಾಸಕ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ಗೆ ತೀವ್ರ ಹಿನ್ನಡೆಯಾಗಿದೆ.
ಕಲಬುರಗಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮತ್ತೆ ಮುಂದುವರಿಸಿದೆ.
ಫಲಿತಾಂಶ ಪ್ರಟಕಗೊಂಡ 168 ಸ್ಥಾನಗಳ ಪೈಕಿ ಭಾರತೀಯ ಜನತಾ ಪಕ್ಷ-63, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-90, ಜನತಾದಳ (ಜಾತ್ಯಾತೀತ)-06, ಬಹುಜನ ಸಮಾಜವಾದಿ ಪಕ್ಷ-01 ಹಾಗೂ ಪಕ್ಷೇತರ-8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಆಳಂದ ಪುರಸಭೆ: ಆಳಂದ ಪುರಸಭೆಯ ಒಟ್ಟು 27 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಭಾಜಪ-13, ಭಾ.ರಾ.ಕಾಂ.-13, ಜೆಡಿಎಸ್-01 ಸ್ಥಾನ ಗಳಿಸಿವೆ. ವಾರ್ಡ ನಂಬರ 21ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಹೀದಾ ಬೇಗಂ ಅಬ್ದುಲ್ ಹಮೀದ್ ಜಮಾದಾರ ಅವರು ಕೇವಲ 1 ಮತದ ಅಂತರದಿಂದ ಜಯಗಳಿಸಿದ್ದಾರೆ.
ಅಫಜಲಪುರ ಪುರಸಭೆ: ಅಫಜಲಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿವೆ. ವಾರ್ಡ ನಂ. 19ರಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತವಾಗಿದ್ದರಿಂದ 22 ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ವಾರ್ಡ ನಂ. 5ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಹಾದಾ ಬೇಗಂ ಅಬ್ದುಲ್ ರೌಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಒಳಗೊಂಡಂತೆ ಭಾಜಪ-05, ಭಾ.ರಾ.ಕಾಂ.-16 ಹಾಗೂ ಪಕ್ಷೇತರ-01 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಜೇವರ್ಗಿ ಪುರಸಭೆ:- ಜೇವರ್ಗಿ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಭಾಜಪ-17, ಭಾರಾಕಾಂ-03, ಜೆಡಿಎಸ್-03 ಸ್ಥಾನಗಳನ್ನು ಗಳಿಸಿವೆ. ವಾರ್ಡ ನಂ. 11 ಮತ್ತು 15ರ ಅಭ್ಯರ್ಥಿಗಳು ಸಮನಾದ ಮತಗಳನ್ನು ಪಡೆದಿದ್ದರಿಂದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚೀಟಿ ಎತ್ತುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಯಿತು. ವಾರ್ಡು ನಂ. 11ರಲ್ಲಿ ಭಾಜಪ ಹಾಗೂ ವಾರ್ಡ ನಂ. 15ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಶೀಲರಾದರು. ವಾರ್ಡ ನಂ. 14ರಲ್ಲಿ ಭಾಜಪ ಅಭ್ಯರ್ಥಿ ಮಲ್ಲಿಕಾರ್ಜುನ ಭಾಗಪ್ಪ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸೇಡಂ ಪುರಸಭೆ: ಸೇಡಂ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಭಾಜಪ-13 ಹಾಗೂ ಭಾರಾಕಾಂ-10 ಸ್ಥಾನಗಳನ್ನು ಗಳಿಸಿದೆ.
ಚಿತ್ತಾಪುರ ಪುರಸಭೆ: ಚಿತ್ತಾಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಭಾಜಪ-05 ಹಾಗೂ ಭಾರಾಕಾಂ-18 ಸ್ಥಾನಗಳನ್ನು ಗಳಿಸಿದೆ.
ಶಹಾಬಾದ ನಗರಸಭೆ: ಶಹಾಬಾದ ನಗರಸಭೆಯ ಒಟ್ಟು 27 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಭಾಜಪ-05, ಭಾರಾಕಾಂ-18, ಜೆಡಿಎಸ್-01 ಹಾಗೂ ಪಕ್ಷೇತರ-03 ಸ್ಥಾನಗಳನ್ನು ಗಳಿಸಿದೆ. ವಾರ್ಡ ನಂ. 22ರ ಜೆಡಿಎಸ್ ಅಭ್ಯರ್ಥಿ ಮಹ್ಮದ್ ಅಮ್ಜದ್ ಮಹ್ಮದ್ ಹುಸೇನ್ ಕೇವಲ 1 ಮತದ ಅಂತರದಿಂದ ಜಯ ಸಾಧಿಸಿದ್ದಾರೆ.
ಚಿಂಚೋಳಿ ಪುರಸಭೆ: ಚಿಂಚೋಳಿ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಭಾಜಪ-05, ಭಾರಾಕಾಂ-12, ಜೆಡಿಎಸ್-01, ಬಿಎಸ್‍ಪಿ-01 ಹಾಗೂ ಪಕ್ಷೇತರ-04 ಸ್ಥಾನಗಳನ್ನು ಗಳಿಸಿದೆ.