ಮಾದಕ ದ್ರವ್ಯ ಮುಕ್ತ ವಿವಿ ಆಗಲಿ ಎಂದ ಡಿಸಿಎಂ

ಗುರುವಾರ, 20 ಸೆಪ್ಟಂಬರ್ 2018 (19:41 IST)
ಮಾದಕ ದ್ರವ್ಯ ಮುಕ್ತ ಯೂನಿವರ್ಸಿಟಿ ಮಾಡುವಂತೆ ವಿದ್ಯಾರ್ಥಿಗಳಿಗೆ ಡಿಸಿಎಂ ಕರೆ ನೀಡಿದ್ದಾರೆ.
ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಇರಬಾರದು. ರಾಜ್ಯದ ಎಲ್ಲಾ ಕಾಲೇಜುಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ತುಮಕೂರಿನಲ್ಲಿ ವಿಶ್ವವಿದ್ಯಾಲಯದ ಪೀಠಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿಮ್ಮ ಕಾಲೇಜುಗಳಲ್ಲಿ ಕಾನೂನು ಸಮ್ಮತವಲ್ಲದ ಕೃತ್ಯಗಳು ನಡೆಯುತ್ತಿದ್ದರೆ ಅಥವಾ ಆ ಕುರಿತು ಮಾಹಿತಿ ಇದ್ದರೆ ಪೋಲಿಸರಿಗೆ ಮಾಹಿತಿ ಕೊಡಬೇಕು ಎಂದರು.

ಇಲ್ಲಾ ಅಂದ್ರೆ ನಮ್ಮ ಪೋಲಿಸರು ಪಕ್ಕದಲ್ಲೆ ಇರುತ್ತಾರೆ. ಅವರು ಎಲ್ಲವನ್ನೂ‌ ಗಮನಿಸುತ್ತಾರೆ. ನಿವೆಲ್ಲರೂ ಸೇರಿ‌ ಡ್ರಗ್ಸ್ ಮುಕ್ತ ಕಾಲೇಜು ಅಂತಾ ಘೋಷಣೆ ಮಾಡಬೇಕು ಎಂದರು. ಮಾದಕ ದ್ರವ್ಯ ಮುಕ್ತ ವಿಶ್ವವಿದ್ಯಾಲಯ ಅಂತಾ ಘೋಷಣೆ ಮಾಡಬೇಕು ಎಂದು ಡಿಸಿಎಂ ಕರೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ