ರಾಜ್ಯದಲ್ಲಿ ಲಾಕ್ ಡೌನ್ ಪದ ದುರ್ಬಳಕೆಯಾಗುತ್ತಿದೆ ಎಂದ ಡಿಸಿಎಂ

ಬುಧವಾರ, 14 ಏಪ್ರಿಲ್ 2021 (13:41 IST)
ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಪದ  ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಆರೋಪ ಮಾಡಿದ್ದಾರೆ.

ಲಾಕ್ ಡೌನ್ ಮಾಡುವಂತೆ ಒತ್ತಡ ಹೇರುತ್ತಿರುವ ವಿಪಕ್ಷಗಳ ಮೇಲೆ ಕಿಡಿಕಾರಿದ ಅವರು, ರಾಜ್ಯದಲ್ಲಿ ಪ್ರತಿದಿನ ದುಡಿದು ಜೀವನ ಮಾಡುವವರಿರುತ್ತಾರೆ. ಲಾಕ್ ಡೌನ್ ಮಾಡಿದರೆ ಅಂತವರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ್ರೆ ಪರಿಹಾರವಾಗುತ್ತದೆ. ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ರಾಜ್ಯದಲ್ಲಿ ನೈಟ್ ಕರ್ಪ್ಯೂ ಮಾಡಿರುವುದು ಒಳ್ಳೆಯ ನಿರ್ಣಯ. ಮುಂದಿನ ದಿನಗಳಲ್ಲಿ ನೈಟ್ ಕರ್ಪ್ಯೂ ತೆರವು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ