ನಿಫಾದಲ್ಲಿ ಮರಣ ಪ್ರಮಾಣ 40- 70ರಷ್ಟಿದೆ

ಭಾನುವಾರ, 17 ಸೆಪ್ಟಂಬರ್ 2023 (14:00 IST)
ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಬೆಳವಣಿಗೆ ದೇಶದ ವೈದ್ಯಕೀಯ ರಂಗಕ್ಕೆ ಸವಾಲಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಒತ್ತಡ ಹೆಚ್ಚಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಐಸಿಎಂಆರ್ ಪ್ರಧಾನ ನಿರ್ದೇಶಕ ರಾಜೀವ್ ಬಹಲ್, ಕೇರಳದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚಳ ಆಗುತ್ತಿರೋದು ಏಕೆ ಅನ್ನೋದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಹೆಚ್ಚಾಗಿದೆ. ಶೇ. 40 ರಿಂದ ಶೇ. 70ರಷ್ಟು ಸೋಂಕಿತರು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ, ಸೋಂಕಿತರಿಗೆ ಆರಂಭಿಕ ಹಂತದಲ್ಲೇ ತ್ವರಿತ ಚಿಕಿತ್ಸೆ ನೀಡಬೇಕಿದೆ ಎಂದು ಐಸಿಎಂಆರ್ ಹೇಳಿದೆ. ಕೋವಿಡ್‌ ಸೋಂಕಿತರ ಮರಣ ಪ್ರಮಾಣ ಕೇವಲ ಶೇ. 2 ರಿಂದ 3ರಷ್ಟಿತ್ತು. ಹೀಗಾಗಿ, ನಿಫಾ ವೈರಾಣುವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ