ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿಳಿಂದ ಸಾಮೂಹಿಕ ರಜೆಗೆ ನಿರ್ಧಾರ

ಶನಿವಾರ, 1 ಜುಲೈ 2023 (14:33 IST)
ಆಂಬುಲೆನ್ಸ್ ಸಿಬ್ಬಂದಿಳು ನಾಲ್ಕು ತಿಂಗಳ ವೇತನ ಸಿಗದ ಹಿನ್ನೆಲೆ ಸಮೂಹಿಕ ರಜೆಗೆ ನಿರ್ಧಾರ ಮಾಡಿದ್ದಾರೆ.ವೇತನ ದೊರೆಯದ ಕಾರಣ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಸಾಮೂಹಿಕ ರಜೆ ತೆಗೆದುಕೊಳ್ಳಲು ಸಿಬ್ಬಂದಿಗಳು ನಿರ್ಧಾರ ಮಾಡಿದ್ದು,ಮಾರ್ಚ್, ಏಪ್ರಿಲ್, ಮೇ, ಜೂನ್ ತಿಂಗಳ ವೇತನ ಬಾಕಿ ಇದೆ.ಮೂರು ವರ್ಷಗಳಿಂದ ಬಾಕಿ ಇರುವ ಅರಿಯರ್ಸ್ (2020,2021,22)ಕೂಡಲೇ ಪಾವತಿ ಮಾಡುವಂತೆ ಅರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ.ಕರ್ನಾಟಕ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿದ್ದು,ದಿನಾಂಕ 07 ರ ಒಳಗೆ ವೇತನ ನೀಡದಿದ್ದಲ್ಲಿ ಸಾಮೂಹಿಕ ರಜೆ ಘೋಷಣೆ ನೌಕರರು ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ