ಎಣ್ಣೆ ಮೇಲಿನ ಸೆಸ್ ಇಳಿಕೆ

ಸೋಮವಾರ, 2 ಮೇ 2022 (20:59 IST)
ಭಾರತದಲ್ಲಿ ಬಳಸುವ ಖಾದ್ಯ ತೈಲಗಳಲ್ಲಿ ಸುಮಾರು ಅರ್ಧದಷ್ಟು ಇಂಡೋನೇಷಿಯಾದಿಂದ ಆಮದಾಗುತ್ತವೆ. ಇಂಡೋನೇಷ್ಯಾ ತಾಳೆ ಎಣ್ಣೆ ಮತ್ತು ಕಚ್ಚಾ ತೈಲ ರಫ್ತನ್ನ ನಿಷೇಧಿಸಿದ ನಂತ್ರ ಭಾರತದಲ್ಲಿ ಖಾದ್ಯ ತೈಲದ ಬೇಡಿಕೆ ಹೆಚ್ಚಾಗಿದೆ. ಪೂರೈಕೆ ಕಡಿಮೆಯಾಗಿರುವುದರಿಂದ ಮತ್ತು ಬೇಡಿಕೆ ಹೆಚ್ಚಾದಂತೆ ಖಾದ್ಯ ತೈಲಗಳ ಬೆಲೆಗಳು ತೀವ್ರವಾಗಿ ಏರಿವೆ.
 
ಖಾದ್ಯ ತೈಲಗಳ ಬೆಲೆಯನ್ನ ಕಡಿಮೆ ಮಾಡಲು ಜನರಿಂದ ಭಾರಿ ಬೇಡಿಕೆಯಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಖಾದ್ಯ ತೈಲಗಳ ಆಮದಿನ ಮೇಲಿನ ಕೃಷಿ ಸೆಸ್ʼನ್ನ ಶೇಕಡಾ 5ರಷ್ಟು ಕಡಿಮೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
 
ಇಂಡೋನೇಷ್ಯಾದ ನಂತ್ರ ಭಾರತವು ಮಲೇಷ್ಯಾದಿಂದ ಹೆಚ್ಚಿನ ಖಾದ್ಯ ತೈಲಗಳನ್ನ ಆಮದು ಮಾಡಿಕೊಳ್ಳುತ್ತದೆ. ಬೇಡಿಕೆಯನ್ನ ಪೂರೈಸಲು ಮಲೇಷ್ಯಾ ಈಗಾಗಲೇ ತೈಲವನ್ನು ಪೂರೈಸಲು ವಿಫಲವಾಗಿದೆ. ಇಂಡೋನೇಷ್ಯಾವು ತಾಳೆ ಎಣ್ಣೆಯ ವಿಶ್ವದ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ಆದ್ರೆ, ರಫ್ತಿನ ಮೇಲಿನ ನಿಷೇಧದಿಂದಾಗಿ ವಿಶ್ವದ ಅನೇಕ ದೇಶಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಹೆಚ್ಚುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ