ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ : ಮುನಿರತ್ನ

ಸೋಮವಾರ, 29 ಆಗಸ್ಟ್ 2022 (11:56 IST)
ಕೋಲಾರ : 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಿದರೆ ಮಾತ್ರ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಲಾಗುವುದು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಕೋಲಾರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಹೇಳಿದಂತೆ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುತ್ತಿದ್ದೇನೆ.

ಇಂದು ಭಾನುವಾರ ರಜೆಯ ದಿನವಾದ್ದರಿಂದ ನಾಳೆ ಬೆಳಗ್ಗೆ 11 ಗಂಟೆಗೆ ಮಾನನಷ್ಟ ಮೊಕದ್ದಮ್ಮೆ ಹೂಡಲಿದ್ದು, ಸಂಘದವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.

ಒಂದು ವೇಳೆ ಗುತ್ತಿಗೆದಾರರು ರಾಜಿಗೆ ಬಂದ್ರೆ ಪತ್ರದ ಮೂಲಕ ಕ್ಷಮಾಪಣೆ ಪತ್ರ ನೀಡಬೇಕು. ಆರೋಪ ಮಾಡಿದವರು ಪ್ರಧಾನಿಗಳಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಬೇಕು. ಅಲ್ಲದೇ ಲೋಕಾಯುಕ್ತ ಹಾಗೂ ಗವರ್ನರ್ಗೆ ತಮ್ಮ ಬಳಿಯಿರುವ ದಾಖಲೆಗಳನ್ನ ನೀಡಿದ್ರೆ ಕೇಸ್ ವಾಪಸ್ ಪಡೆಯಲಾಗುವುದು ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ