ದೆಹಲಿ ಲಿಕ್ಕರ್ ಹಗರಣ: ಕವಿತಾಗೆ ಸಂಕಷ್ಟ
ಜಾರಿ ನಿರ್ದೇಶನಾಲಯ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ವಿರುದ್ಧ ಗಂಭೀರ ಆರೋಪ ಮಾಡಿದೆ. ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಮತ್ತು ಅವರ ಪಾಲುದಾರ ಒಟ್ಟಾಗಿ ಲಿಕ್ಕರ್ ಕಂಪನಿ ಇಂಡೊ ಸ್ಪಿರಿಟ್ನಲ್ಲಿ ಶೇಕಡಾ 65ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ಹೇಳಿದೆ. ಕವಿತಾ ಅವರ ಹೆಸರು ಆರಂಭದಿಂದಲೂ ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಳಿಬರುತ್ತಿದೆ. ಕಳೆದ ತಿಂಗಳು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ED ಕವಿತಾ ಪ್ರತಿನಿಧಿಗಳ ಮೂಲಕ ಮದ್ಯದ ಕಂಪೆನಿಯಲ್ಲಿ ಪಾಲನ್ನು ಹೊಂದಿದ್ದು ಪ್ರತಿನಿಧಿಗಳನ್ನು ಗುರುತಿಸಿ ತನಿಖೆ ನಡೆಸಲಾಗಿದೆ ಎಂದು ಹೇಳಿದೆ. ED ವಿಶೇಷ ಕೋರ್ಟ್ ನಲ್ಲಿ ನ್ಯಾಯಾಧೀಶ ಎಂ.ಕೆ.ನಾಗ್ ಪಾಲ್ ಮುಂದೆ ಆರೋಪಪಟ್ಟಿಯನ್ನು ಸಲ್ಲಿಸಿದ್ದು ಪ್ರಕರಣದ ಗಂಭೀರತೆ ಮತ್ತು ತೀವ್ರತೆಯನ್ನು ಪರಿಗಣಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿದೆ. ದೆಹಲಿ ಲಿಕ್ಕರ್ ಹಗರಣ ಬೆಳಕಿಗೆ ಬಂದ ರೀತಿಯನ್ನು ಜಾರಿ ನಿರ್ದೇಶನಾಲಯ ವಿವರವಾಗಿ ತಿಳಿಸಿದೆ.