108 ವಾಹನದಲ್ಲಿಯೇ ಹೆರಿಗೆ

ಗುರುವಾರ, 16 ಆಗಸ್ಟ್ 2018 (18:12 IST)
108 ವಾಹನದಲ್ಲಿಯೇ ಗರ್ಭೀಣಿಗೆ ಹೆರಿಗೆಯಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಳಗಾನೂರ ಕ್ರಾಸ್ ಬಳಿ ಘಟನೆ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಬಿಳೇಭಾವಿ ಗ್ರಾಮದ ಬಸಮ್ಮಾ ನಿಂಗಪ್ಪ ಕೆಸರಟ್ಟಿಗೆ ಹೆರಿಗೆಯಾಗಿದೆ.

108 ವಾಹನದ ಸಿಬ್ಬಂದಿಗಳ ಸಮಯೋಚಿತ ಚಿಕಿತ್ಸೆಯಿಂದಾಗಿ ಸುಸೂತ್ರ ಹೆರಿಗೆಯಾಗಿದೆ. ಆರೋಗ್ಯದಿಂದ ತಾಯಿ & ಮಗು ಇದ್ದಾರೆ. ತಾಳಿಕೋಟೆ ಸಮುದಾಯ ಕೇಂದ್ರದಲ್ಲಿ ಬಾಣಂತಿ & ಮಗುವಿಗೆ  ಚಿಕಿತ್ಸೆ ಮುಂದುವರೆದಿದೆ. ತಾಳಿಕೋಟೆ ಸರಕಾರಿ ಸಮುದಾಯ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿಗಳು & ಸಿಬ್ಬಂದಿ ಮೇಲೆ ನಿರ್ಲಕ್ಷ್ಯ & ಕರ್ತವ್ಯಲೋಪದ ಆರೋಪ ಕೇಳಿಬಂದಿದೆ.

ಮೊದಲು ಹೆರಿಗೆ ನೊವಿನಿಂದ ಬಳಲುತ್ತಿದ್ದ ಬಸಮ್ಮಾ ಳನ್ನ ಬಿಳೇಭಾವಿ ಗ್ರಾಮದಿಂದ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಗರ್ಭೀಣಿಯನ್ನ ದಾಖಲು ಮಾಡಿಕೊಳ್ಳದೇ, ರಕ್ತಹೀನತೆಯಿಂದ ಬಳಲುತ್ತಿದ್ದಾಳೆ ಎಂದು ಆಸ್ಪತ್ರೆಯ ಸಿಬ್ಬಂದಿ ಬಸವನ ಬಾಗೇವಾಡಿ ಅಥವಾ ವಿಜಯಪುರ ಜಿಲ್ಲಾಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದ್ದರು. ಆದರೆ ಮಾರ್ಗಮಧ್ಯೆಯೇ ಬಳಗಾನೂರ ಕ್ರಾಸ್ ಬಳಿ ನೋವು ಉಲ್ಬಣಿಸಿ  ಹೆರಿಗೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ