ಜನನ ದರ ಹೆಚ್ಚಿಸುವ ಸಲುವಾಗಿ ದಂಪತಿಗಳಿಗೆ ಭಾರೀ ಕೊಡುಗೆ ನೀಡಿದ ಚೀನಾ ಸರಕಾರ

ಶುಕ್ರವಾರ, 20 ಜುಲೈ 2018 (07:21 IST)
ಚೀನಾ : ಜನನ ದರ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚೀನಾ ಸರಕಾರ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ.


ಜನನ ದರ ಹೆಚ್ಚಿಸುವುದಕ್ಕಾಗಿ ಚೀನಾ ಸರಕಾರ ಆರ್ಥಿಕ ಸಬ್ಸಿಡಿಗಳನ್ನು ಹಾಗೂ ವೇತನ ಸಹಿತ ಹೆರಿಗೆ ರಜೆಯನ್ನು ವಿಸ್ತರಿಸುವ ಕೊಡುಗೆಗಳನ್ನು ನೀಡುವುದರ ಮೂಲಕ ಎರಡನೇ ಮಗುವನ್ನು ಪಡೆಯಲು ದಂಪತಿಗಳ ಇಚ್ಚಿಸುವಂತೆ ಮಾಡಲು ಮುಂದಾಗಿದೆ.


ಚೀನಾ ಸರಕಾರ ಒಂದೇ ಮಗು ನೀತಿಯನ್ನು 2016ರಲ್ಲಿ ಹಿಂದಕ್ಕೆ ಪಡೆದುಕೊಂಡ ನಂತರವೂ ಕೂಡ ಚೀನಾದಲ್ಲಿ ಜನನ ದರ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಚೀನಾದ 31 ಪ್ರಾಂತಗಳು, ವಲಯಗಳು ಮತ್ತು ಮುನಿಸಿಪಾಲಿಟಿಗಳು 98 ದಿನಗಳ ಕಡ್ಡಾಯ ಹೆರಿಗೆ ರಜೆಯನ್ನು 138 ದಿನಗಳಿಂದ 158 ದಿನಗಳವರೆಗೆ ವಿಸ್ತರಿಸಿವೆ ಎಂದು ಸರಕಾರಿ ನಿಯಂತ್ರಣದ ವೆಬ್‌ಸೈಟ್ 'ದಪೇಪರ್.ಸಿಎನ್' ವರದಿ ಮಾಡಿದೆ. ಕೆಲವು ವಲಯಗಳಲ್ಲಿ ದಂಪತಿಗಳಿಗೆ ಹಣಕಾಸು ಭತ್ತೆಗಳು ಮತ್ತು ವೈದ್ಯಕೀಯ ಸೇವೆಗಳನ್ನೂ ಘೋಷಿಸಲಾಗಿದೆ. ತಂದೆಯಂದಿರಿಗೂ 15ರಿಂದ 30 ದಿನಗಳ ಪಿತೃತ್ವ ರಜೆಯನ್ನು ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ