ನಗರದಲ್ಲಿ ಕೆಂಪು ಗುಲಾಬಿಗೆ ಡಿಮ್ಯಾಂಡ್

geetha

ಭಾನುವಾರ, 11 ಫೆಬ್ರವರಿ 2024 (20:20 IST)
ಬೆಂಗಳೂರು- ನಗರದ ಹೆಬ್ಬಾಳದ ಐಎಫ್‌ಎಬಿ ಕೇಂದ್ರಕ್ಕೆ ಬಣ್ಣ ಬಣ್ಣದ ಗುಲಾಬಿಗಳು ಎಂಟ್ರಿಕೊಟ್ಟಿದೆ.ಪ್ರೇಮಿಗಳ ದಿನಾಚರಣೆ ಹಿನ್ನೆಲೆ  ಕೆಂಪು ಗುಲಾಬಿಗೆ ದೇಶ ವಿದೇಶ ಗಳಲ್ಲಿಯೂ  ಬೇಡಿಕೆ ಹೆಚ್ಚಾಗಿದೆ.ಈಗ ಪ್ರೇಮಿಗಳ ದಿನ ಬರುತ್ತಿದಂತೆ ವ್ಯಾಪಾರಿಗಳಿಗೂ ಹರ್ಷ ಉಂಟಾಗಿದೆ.
 
ಈ ದಿನಕ್ಕಾಗಿಯೇ ಕೆಂಪು ಗುಲಾಬಿ ಬೆಳೆಸುವವರ ಸಂಖ್ಯೆ ಸಹ ಹೆಚ್ಚಳವಾಗಿದ್ದು,ಇದೇ ಪ್ರಮಾಣದಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತ್ತ, ಒಡಿಶಾ, ಗುವಾಹಟಿ, ಚಂಡೀಗಢ, ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸೇರಿದಂತೆ ದೇಶದ ಪ್ರಮುಖ ನಗರಗಳು ಗುಲಾಬಿ ಮಾರಾಟವಾಗ್ತಿದೆ.ಅಲ್ಲದೇ ಮಲೇಷ್ಯಾ, ಅರಬ್ ರಾಷ್ಟ್ರಗಳು, ಸಿಂಗಪುರ ಹಾಗೂ ನ್ಯೂಜಿಲ್ಯಾಂಡ್ ರಾಷ್ಟ್ರಗಳಿಗೆ ಪ್ರತಿನಿತ್ಯ ಲಕ್ಷಾಂತರ ಗುಲಾಬಿಗಳು ಐಎಫ್‌ಎಬಿ ಕೇಂದ್ರದಿಂದ ರಫ್ತಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ