ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಭೀಕರ ಅಪಘಾತ

geetha

ಗುರುವಾರ, 8 ಫೆಬ್ರವರಿ 2024 (14:30 IST)
ಬೆಂಗಳೂರು-ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಭೀಕರ ಅಪಘಾತವಾಗಿದೆ.ಇಟ್ಟಿಗೆ ತುಂಬಿದ ಲಾರಿಗೆ KSRTC ಬೇಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಬೆಂಗಳೂರಿನಿಂದ ಮೈಸೂರಿಗೆ  ಇಟ್ಟಿಗೆ ತುಂಬಿದ್ದ ಲಾರಿ ತೆರಳುತ್ತಿತ್ತು.ಘಟನೆಯಲ್ಲಿ ಸುಮಾರು 10 ಜನಕ್ಕೆ ಗಾಯವಾಗಿದೆ.ಮಹಿಳೆಯರು, ಮಕ್ಕಳು‌ ಸೇರಿ 10 ಕ್ಕು ಹೆಚ್ಚು ಪ್ರಯಾಣಿಕರಿಗೆ ‌ಗಾಯವಾಗಿದೆ.ಮಂಡ್ಯದ ಸುಂಡನಹಳ್ಳಿ ಫ್ಲೈ ಓವರ್ ಮೇಲೆ ಅಪಘಾತವಾಗಿದೆ.ಘಟನೆಯಾಗಿ ಅರ್ಧ ಗಂಟೆಯಾದ್ರು ಅಂಬ್ಯುಲೆನ್ಸ್ ಸ್ಥಳಕ್ಕೆ ಬಂದಿಲ್ಲ.ಗಾಯಳುಗಳ ಕಷ್ಟಕ್ಕೆ ಧಾವಸಿದೆ ಮೊಬೈಲ್ ನಲ್ಲಿ  ಜನ ರೆಕಾರ್ಡ್ ಮಾಡಿಕೊಂಡಿದ್ದಾರೆ.ಮಂಡ್ಯ ಗ್ರಾಮಾಂತರ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ