ಮೈಸೂರಿನಲ್ಲಿ ಹಿಂದೂ ದೇವಾಲಯ ನೆಲಸಮ

ಭಾನುವಾರ, 12 ಸೆಪ್ಟಂಬರ್ 2021 (19:56 IST)
ಮೈಸೂರಿನಲ್ಲಿ ಹಿಂದೂ ದೇವಾಲಯ ನೆಲಸಮ ಮಾಡಿದಕ್ಕೆ ಜಿಲ್ಲಾಡಳಿತ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   
ಜಿಲ್ಲಾಡಳಿತ, ನಂಜನಗೂಡಿನಲ್ಲಿ ಮಹದೇವಮ್ಮ ದೇವಸ್ಥಾನವನ್ನು ಎಲ್ಲರೂ ಮಲಗಿದ್ದಾಗ ಕಳ್ಳರಂತೆ ಒಡಿಯುತ್ತಿರಾ...? ಅನಾನೂಕುಲ ಆದ್ರೆ ಜನರ ಸಲಹೆ ಪಡೆದು ಸ್ಥಳಾಂತರ ಮಾಡಿ. ಅದು ಬಿಟ್ಟು ಎಲ್ಲರೂ ಮಲಗಿದ್ದಾಗ ಏಕಾಏಕಿ ದೇವಸ್ಥಾನ ಕೆಡವಿದ್ರೆ ಹೇಗೆ.? 2009 ರಲ್ಲಿ ಸುಪ್ರೀಂಕೋರ್ಟ್ ರಸ್ತೆ, ಪುಟ್ ಪಾತ್ ಮೇಲಿದ್ದ ದೇವಸ್ಥಾನ, ಚರ್ಚ್, ಮಸೀದಿ ತೆರವು ಮಾಡಿ ಅಂತ ಆದೇಶಿಸಿದೆ. ಹೀಗಿರುವಾಗ ದೇವರಾಜ ಅರಸ್ ರಸ್ತೆಯಲ್ಲಿರೋ ದರ್ಗಾವನ್ನು ಏಕೆ ತೆರವು ಮಾಡಿಲ್ಲ? ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಡಿದ್ದೀರಾ.? ನಿಮಗೆ ಬರೀ ಹಿಂದೂ ದೇವಾಲಯಗಳು ಮಾತ್ರನಾ ಕಾಣ್ತಿರೋದು..? ಪ್ರಾರ್ಥನಾ ಮಾಡುವ ಚರ್ಚ್, ಮಸೀದಿ ನೆಲಸಮ ಮಾಡಬಹುದು, ಆದ್ರೆ, ದೇವಸ್ತಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿರುತ್ತೆ.. ಸುಖಾಸುಮ್ಮನೆ ನೆಲಸಮ ಮಾಡಲು ಆಗಲ್ಲ ಎಂದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ನೋವಾದಾಗ ನಮಗೂ ಕೋಪ ಬರುತ್ತೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ