ಜನರ ಸಮಸ್ಯೆ ಆಲಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಓಪನ್ ಮಾಡಿದ ಗೃಹ ಇಲಾಖೆ

ಬುಧವಾರ, 3 ಜುಲೈ 2019 (09:40 IST)
ಬೆಂಗಳೂರು : ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ತಿಳಿಸುವ ಸಲುವಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಓಪನ್ ಮಾಡಿದೆ.



ಜನರು ತಮ್ಮ ಸುತ್ತ ನಡೆಯುತ್ತಿರುವ ಅಕ್ರಮ ಚಟುವಟಿಕೆ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಸಮಸ್ಯೆ ಬಗ್ಗೆ ಪೊಲೀಸ್​ ಠಾಣೆಗೆ ಬಂದು ದೂರು ನೀಡಲು ಹಿಂಜರಿಯುತ್ತಿರುವ ಕಾರಣ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​, ಟ್ವಿಟರ್, ಶೇರ್​ಚಾಟ್​ನಲ್ಲಿ ಗೃಹ ಇಲಾಖೆ ಖಾತೆ ತೆರೆದಿದ್ದು, ಜನರು ಇಲ್ಲಿ ಮುಕ್ತವಾಗಿ ದೂರು ನೀಡಲು ಅವಕಾಶ ಮಾಡಿಕೊಟ್ಟಿದೆ.


ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಇಂತಹ ಒಂದು ನೂತನ ಪ್ರಯತ್ನವನ್ನು ಆರಂಭಿಸಿದ್ದು, ಇದರಲ್ಲಿ ಜನರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲ ಅಧಿಕಾರಿಗಳು ಸಮಸ್ಯೆಗೆ ಪರಿಹಾರವನ್ನು ಕೂಡ ಸೂಚಿಸಲಿದ್ದಾರಂತೆ. ಅಲ್ಲದೇ ರಾಜ್ಯದ ನಾನಾ ಪೊಲೀಸ್ ಠಾಣೆಗಳಲ್ಲಿ ನಡೆದ ಜನಪರ ಚಟುವಟಿಕಗೆಳು, ಅಪರಾಧ, ಸಂಚಾರ ದಟ್ಟಣೆ ತಡೆಗಟ್ಟಲು ಕೈಗೊಂಡ ಕ್ರಮಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೆ ಗೃಹ ಇಲಾಖೆ ಮಾಹಿತಿ ಒದಗಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ